Gokarna Beach :ಗೋಕರ್ಣಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಬೆಂಗಳೂರಿನ ಯುವಕ 50 ಅಡಿ ಆಳಕ್ಕೆ ಬಿದ್ದು ಗಂಭೀರ ಗಾಯ

By Ravi Janekal  |  First Published Jan 1, 2023, 2:17 PM IST

ಗೋಕರ್ಣ ಸಮುದ್ರದ ಬಳಿ ಟ್ರೆಕ್ಕಿಂಗ್ ತೆರಳಿದ್ದ ವೇಳೆ 50 ಅಡಿ ಆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದ ಪ್ರವಾಸಿ ಯುವಕನನನ್ನು ರಕ್ಷಣೆ ಮಾಡಲಾಗಿದೆ. ಸೌರವ್ ಯಾದವ್ ಗಾಯಗೊಂಡಿರುವ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ.


ಕಾರವಾರ, ಉತ್ತರಕನ್ನಡ (ಜ.1) : ಗೋಕರ್ಣ ಸಮುದ್ರದ ಬಳಿ ಟ್ರೆಕ್ಕಿಂಗ್ ತೆರಳಿದ್ದ ವೇಳೆ 50 ಅಡಿ ಆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದ ಪ್ರವಾಸಿ ಯುವಕನನನ್ನು ರಕ್ಷಣೆ ಮಾಡಲಾಗಿದೆ.  ಗಾಯಗೊಂಡ ಸೌರವ್ ಯಾದವ್(Saurav yadav) ಬೆಂಗಳೂರಿ(Bengaluru)ನ ಖಾಸಗಿ ಉದ್ಯೋಗಿಯಾಗಿದ್ದು, ಗೋಕರ್ಣ(Gokarna)ದ ಪ್ಯಾರಡೈಸ್ ಬೀಚ್‌(Paradise Beach) ಬಳಿ ಟ್ರೆಕ್ಕಿಂಗ್(Trekking) ಹೊರಟಿದ್ದ ವೇಳೆ ನಡೆದಿರುವ ದುರ್ಘಟನೆ.

50 ಅಡಿ ಆಳಕ್ಕೆ ಬಿಳುವುದನ್ನು ಗಮನಿಸಿದ್ದ ಪ್ರವಾಸಿ ಬೋಟ್(Tourist boat) ಚಾಲಕ ತಕ್ಷಣ ಯುವಕನ ರಕ್ಷಣೆಗಾಗಿ ಕರಾವಳಿ ಕಾವಲುಪಡೆ(Coast Guard)ಗೆ ಮಾಹಿತಿ ನೀಡಿದ್ದ. ಕರಾವಳಿ ಕಾವಲುಪಡೆ ಲೈಫ್‌ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಯುವಕನಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

ಹಿಮಾಚಲದಲ್ಲಿ ಟ್ರೆಕ್ಕಿಂಗ್‌ ವೇಳೆ ನಾಪತ್ತೆ ಆಗಿದ್ದ ಬೆಂಗ್ಳೂರಿನ ವ್ಯಕ್ತಿ ಶವವಾಗಿ ಪತ್ತೆ!

click me!