ಕೊರೋನಾ: ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೂಗಿಡ, ಚಾಕ್ಲೆಟ್ ಕೊಟ್ಟು ಬೀಳ್ಕೊಟ್ಟ ವೈದ್ಯರು

Suvarna News   | Asianet News
Published : May 31, 2020, 03:42 PM ISTUpdated : May 31, 2020, 03:52 PM IST
ಕೊರೋನಾ: ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೂಗಿಡ, ಚಾಕ್ಲೆಟ್ ಕೊಟ್ಟು ಬೀಳ್ಕೊಟ್ಟ ವೈದ್ಯರು

ಸಾರಾಂಶ

ಉಡುಪಿಯಲ್ಲಿ 14 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಲಿಸಿದ ಜನರಿಗೆ ವೈದ್ಯರು ಹೂಗಿಡ ಹಾಗೂ ಚಾಕಲೇಟ್ ಕೊಟ್ಟು ಬೀಳ್ಕೊಟ್ಟಿದ್ದಾರೆ.

ಉಡುಪಿ(ಮೇ 31): ಉಡುಪಿಯಲ್ಲಿ 14 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಲಿಸಿದ ಜನರಿಗೆ ವೈದ್ಯರು ಹೂಗಿಡ ಹಾಗೂ ಚಾಕಲೇಟ್ ಕೊಟ್ಟು ಬೀಳ್ಕೊಟ್ಟಿದ್ದಾರೆ.

ಗುಣಮುಖರಾದ ಮತ್ತಷ್ಟು ಜನ ಡಿಸ್ಚಾರ್ಜ್ ಆಗಿದ್ದು, ಉಡುಪಿಯ 14 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕುಂದಾಪುರ ಸರಕಾರಿ ಆಸ್ಪತ್ರೆಯಿಂದ14 ಜನ ಡಿಸ್ಚಾರ್ಜ್‌ ಆಗಿದ್ದಾರೆ.

ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢ?

ರೋಗ ಸೋಲಿಸಿದವರಿಗೆ ಹೂವಿನ ಗಿಡಗಳನ್ನು ಕೊಟ್ಟು ವೈದ್ಯರು ಬೀಳ್ಕೊಟ್ಟಿದ್ದಾರೆ. ಡಿಎಚ್‌ಒ ಮಕ್ಕಳಿಗೆ ಚಾಕ್ಲೇಟ್ ಕೊಟ್ಟು ಡಿಸ್ಚಾರ್ಜ್ ಮಾಡಿದ್ದಾರೆ. ಎಸಿ, ಪೊಲೀಸರು ವೈದ್ಯಾಧಿಕಾರಿಗಳು ಬಿಡುಗಡೆ ಸಂದರ್ಭ ಭಾಗಿಯಾಗಿದ್ದರು.

ಉಡುಪಿ ಜಿಲ್ಲೆಯಿಂದ ಈವರೆಗೆ ಒಟ್ಟು 64 ಸೋಂಕಿತರು ಗುಣಮುಖರಾಗಿ`ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಕೇಸುಗಳ ಸಂಖ್ಯೆ 112 ಕ್ಕೆ ಇಳಿಕೆಯಾಗಿದೆ.

PREV
click me!

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
Kogilu Layout: ಶೆಡ್‌ ಧ್ವಂಸ ಕುರಿತು ಪಾಕ್‌ಗೆ ಉಗ್ರರಿಂದ ಮಾಹಿತಿ, ಇದು ಸ್ಲೀಪರ್‌ಸೆಲ್‌ಗಳ ಕೆಲಸ: ಆರ್ ಅಶೋಕ್