ಪೊಲೀಸ್ ಅಧಿಕಾರಿಯ ಮಾದರಿ ಕಾರ್ಯ/ ನೂರಾರು ವಲಸೆ ಕಾರ್ಮಿಕರ ಜೀವ ಕಾಪಾಡಿದ ಕಾನ್ಸ್ ಟೇಬಲ್/ ಶಿವಾಜಿನಗರ ಠಾಣೆಯ ರವಿಕುಮಾರ್/ ರವಿಕುಮಾರ್ ಕಾರ್ಯಕ್ಕೆ ಮೆಚ್ಚುಗೆಜ್ಞೆಗೆ ಸನ್ಮಾನ, ನೂರಾರು ಕಾರ್ಮಿಕರ ಜೀವ ಉಳಿಸಿದ ಅಧಿಕಾರಿ
ಬೆಂಗಳೂರು(ಮೇ 31) ಈ ಕಾನ್ಸ್ ಟೇಬಲ್ ಒನ್ ಮ್ಯಾನ್ ಆರ್ಮಿ ರೀತಿ ಕೆಲಸ ಮಾಡಿದ್ದಾರೆ. ಸಮಯಪ್ರಜ್ಞೆಯಿಂದ ನೂರಾರು ವಲಸೆ ಕಾರ್ಮಿಕರ ಜೀವ ಉಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ದುರ್ಘಟನೆ ನಡೆದಿದ್ದರೂ ಪೊಲೀಸ್ ಅಧಿಕಾರಿ ಶಿವಾಜಿನಗರ ಠಾಣೆಯ ಕಾನ್ಸ್ ಟೇಬಲ್ ರವಿ ಕುಮಾರ್ ಕಾರ್ಯದಿಂದ ಯಾವುದೇ ಅವಘಢಕ್ಕೆ ಆಸ್ಪದವಾಗಿಲ್ಲ.
ಬೆಂಗಳೂರು ಪೊಲೀಸರ ನೆರವಿಗೆ ಕ್ರಿಕೆಟಿಗ ಅನಿಲ್ ಕುಂಬ್ಳೆ
ಶುಕ್ರವಾರ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರನ್ನು ಶಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಬಿರುಗಾಳಿ ಸಹೀತ ಭಾರೀ ಮಳೆಗೆ, ಮರ ಧರೆಗುರುಳಿದ್ದರಿಂದ ಹಿನ್ನೆಲೆ ಅರಮನೆ ಮೈದಾನ ಶೆಲ್ಟರ್ ಕುಸಿದು ಬಿದ್ದಿತ್ತು. ಈ ವೇಳೆ,ಸಮಯಪ್ರಜ್ಞೆ ಮೆರೆದ ಕಾನ್ಸ್ ಟೇಬಲ್ ರವಿಕುಮಾರ್ ಶೆಲ್ಟರ್ ನಲ್ಲಿದ್ದ ನೂರಾರು ಜನರನ್ನು ಹೊರಗೆ ಕರೆತಂದಿದ್ದಾರೆ. ಶೆಲ್ಟರ್ ಅವಶೇಷದಡಿ ಸಿಲುಕಿದ್ದ ಮಗುವೊಂದನ್ನ ಹೊತ್ತು ತಂದಿದ್ದಾರೆ. ಕುಸಿದು ಬಿದ್ದ ಶೆಲ್ಟರ್ ಅಡಿ 400 ಕ್ಕೂ ಅಧಿಕವಲಸೆ ಕಾರ್ಮಿಕರು ಆಶ್ರಯ ಪಡೆದಿದ್ದರು.
ಎಂಬಿಎ ಗೋಲ್ಡ್ ಮೆಡಲಿಸ್ಟ್ ಆಗಿರುವ ಕಾನ್ಸ್ ಟೇಬಲ್ ರವಿಕುಮಾರ್ ಕುವೆಂಪು ವಿಶ್ವವಿದ್ಯಾಲಯ ದಲ್ಲಿ ಎರಡು ವರ್ಷ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ರವಿಕುಮಾರ್ ಸರ್ಕಾರಿ ಸೇವೆ ಮಾಡಲು ಪೊಲೀಸ್ ಇಲಾಖೆಗೆ ಸೇರಿದರು. ಕಾನ್ಸಟೇಬಲ್ ರವಿಕುಮಾರ್ ಗೆ ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತ ಪಡಿಸಿದೆ. ಶಿವಾಜಿನಗರ ಪೊಲೀಸ್ ಠಾಣೆಗೆ ಆಗಮಿಸಿದ ಆಯುಕ್ತ ಭಾಸ್ಕರ್ ರಾವ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕಾನ್ ಸ್ಟೇಬಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.