ಗೋವಾದ ವಿದ್ಯಾರ್ಥಿಗಳಿಗೆ ಕಾರವಾರದಲ್ಲಿ SSLC ಪರೀಕ್ಷೆ

By Kannadaprabha News  |  First Published May 31, 2020, 2:32 PM IST

ಲಾಕ್‌ಡೌನ್‌ನಿಂದಾಗಿ ಗೋವಾದಲ್ಲಿ ಕಲಿಯುತ್ತಿದ್ದ ಸ್ಥಳೀಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾರವಾರದಲ್ಲೇ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದಾರೆ.


ಕಾರವಾರ(ಮೇ 31): ಲಾಕ್‌ಡೌನ್‌ನಿಂದಾಗಿ ಗೋವಾದಲ್ಲಿ ಕಲಿಯುತ್ತಿದ್ದ ಸ್ಥಳೀಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾರವಾರದಲ್ಲೇ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದಾರೆ.

ಕೋವಿಡ್‌ -19 ಸೋಂಕಿನಿಂದಾಗಿ ಲಾಕ್‌ಡೌನ್‌ ಆಗಿದ್ದು, ಅಂತಾರಾಜ್ಯ ಬಸ್‌ ಸಂಚಾರ ಇಲ್ಲದ ಕಾರಣ ಕಾರವಾರ ಮೂಲದ 23 ವಿದ್ಯಾರ್ಥಿಗಳಿಗೆ ಗೋವಾಕ್ಕೆ ತೆರಳಿ ಪರೀಕ್ಷೆ ಬರೆಯುವುದು ಅಸಾಧ್ಯವಾಗಿತ್ತು. ಹೀಗಾಗಿ ಗೋವಾ ಸರ್ಕಾರವು ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದು, ತಾಲೂಕಿನ ಮಾಜಾಳಿ ಯೂನಿಯನ್‌ ಪ್ರೌಢಶಾಲೆಯಲ್ಲಿ ಗೋವಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.

Latest Videos

undefined

ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಸ್ಯಾನಿಟೈಸರ್‌ ಮೂಲಕ ಕೈ ಶುಚಿಗೊಳಿಸಿಕೊಂಡು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೇ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಗೋವಾದ ಶಿಕ್ಷಕರು ಪ್ರಶ್ನೆ ಪತ್ರಿಕೆಗಳನ್ನು ತಂದು ಮಾಜಾಳಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸುತ್ತಿದ್ದು, ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಗೋವಾದಲ್ಲಿ ಕಲಿಯುತ್ತಿದ್ದ ಸ್ಥಳೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಲಾಕ್‌ಡೌನ್‌ ಅವಧಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪಾಲಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢ?

ಸರ್ಕಾರದ ಆದೇಶದ ಮೇರೆಗೆ ಗೋವಾ ವಿದ್ಯಾರ್ಥಿಗಳಿಗೆ ಯೂನಿಯನ್‌ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಎರಡು ಕೊಠಡಿಯಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಯೂನಿಯನ್‌ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶಿಲ್ಪಾ ಸಾಳುಂಕೆ ತಿಳಿಸಿದ್ದಾರೆ.

click me!