ಕೊಡ​ಗಿ​ನಲ್ಲಿ ಕೋವಿಡ್‌ ಸೋಂಕು ಸ್ಫೋಟ: ಇಬ್ಬರು ವೈದ್ಯರು ಸೇರಿ 14 ಪ್ರಕರಣ

By Kannadaprabha News  |  First Published Jun 25, 2020, 8:23 AM IST

ಕೊರೋನಾ ಸೋಂಕಿನಿಂದ ಮುಕ್ತವಾಗಿ ಹಸಿರು ವಲಯವಾಗಿದ್ದ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಮಡಿ​ಕೇ​ರಿಯ ಇಬ್ಬ​ರು ವೈದ್ಯರು ಸೇರಿದಂತೆ 14 ಕೋವಿಡ್‌-19 ಸೋಂಕು ಪ್ರಕರಣಗಳು ವರದಿಯಾಗಿದೆ.


ಮಡಿಕೇರಿ(ಜೂ.25): ಕೊರೋನಾ ಸೋಂಕಿನಿಂದ ಮುಕ್ತವಾಗಿ ಹಸಿರು ವಲಯವಾಗಿದ್ದ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಮಡಿ​ಕೇ​ರಿಯ ಇಬ್ಬ​ರು ವೈದ್ಯರು ಸೇರಿದಂತೆ 14 ಕೋವಿಡ್‌-19 ಸೋಂಕು ಪ್ರಕರಣಗಳು ವರದಿಯಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಹಿಂದಿನ 8 ಪ್ರಕರಣಗಳು ಸೇರಿದಂತೆ ಒಟ್ಟು 22 ಕೋವಿಡ್‌ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 3 ಪ್ರಕರಣಗಳು ಗುಣಮುಖವಾಗಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ 19 ಪ್ರಕರಣಗಳು ಸಕ್ರಿಯವಾಗಿವೆ.

Tap to resize

Latest Videos

10 ಸಾವಿರ ಗಡಿ ದಾಟಿದ ಕೊರೋನಾ, ಸಕ್ರಿಯ ಸೋಂಕಿತರ ಸಂಖ್ಯೆ 3799!

ಈ ಪೈಕಿ 2 ಪ್ರಕರಣದಲ್ಲಿ ಸೋಂಕಿತ ವ್ಯಕ್ತಿಗಳು, ಕೋವಿಡ್‌ ಸಂಬಂಧಿತ ಲಕ್ಷಣಗಳಿಂದ ಈಗಾಗಲೇ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಪಾಟಿ​ಟಿವ್‌ ವರ​ದಿ​ಗಳ ಪೈಕಿ 7 ಪ್ರಕರಣಗಳು ಕೋವಿಡ್‌-19 ಸಂಬಂಧಿತ ಕರ್ತವ್ಯದಲ್ಲಿ ಮುಂಚೂಣಿಯಲ್ಲಿದ್ದವರಾಗಿರುತ್ತಾರೆ. ಮುಂಚೂಣಿ ಕೆಲ​ಸ​ಗಾ​ರ​ರು ಹಾಗೂ ಖಾಸಗಿ ಕ್ಲಿನಿಕ್‌ ಮತ್ತು ಕೋವಿಡ್‌ಯೇತರ ಆಸ್ಪತ್ರೆಗೆ ಸಂಬಂಧಿಸಿದವರಾಗಿರುತ್ತಾರೆ. ಉಳಿದ 5 ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕಿತ ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುತ್ತವೆ.

ಬುಧವಾರ ಜಿಲ್ಲೆಯ ಅಶ್ವಿನಿ ಆಸ್ಪತ್ರೆಯನ್ನು (ಜಿಲ್ಲಾ ಆಸ್ಪತ್ರೆ) ಸೋಂಕು ನಿವಾರಣೆಗೊಳಿಸುವ ಕಾರ್ಯದ ನಿಮಿತ್ತ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರಲಿಲ್ಲ. ಹೊಸದಾಗಿ ವರದಿಯಾದ ಕೋವಿಡ್‌-19 ರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಂತ್ರಿತ ವಲಯಗಳನ್ನು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ.

ಟ್ರಾವೆಲ್‌ ಹಿಸ್ಟರಿ ಮುಚ್ಚಿಟ್ಟ ಸೋಂಕಿತೆ ಮೇಲೆ ಕ್ರಿಮಿನಲ್‌ ಕೇಸು

ಹೊಸದಾಗಿ ವರದಿಯಾದ ಕೋವಿಡ್‌-19 ರ ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕು ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಸೋಮವಾರ ಸೋಮವಾರಪೇಟೆಯ ಹಣ್ಣಿನ ವ್ಯಾಪಾರಿ ಸೇರಿದಂತೆ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಪರಿಣಾಮ ಸೋಂಕಿತರ ನಿವಾಸದ ಸುತ್ತಲಿನ ಪ್ರದೇಶವನ್ನು ಜಿಲ್ಲಾಡಳಿತ ಸೀಲ್‌ಡೌನ್‌ ಮಾಡಲಾಗಿತ್ತು. ಮಂಗಳವಾರ ದಿನ ಹಣ್ಣಿನ ವ್ಯಾಪಾರಿಯ ಇಬ್ಬರು ಮಕ್ಕಳಲ್ಲೂ ಸೋಂಕು ಪತ್ತೆಯಾಗಿತ್ತು. ಕೊರೋನಾ ಸೋಂಕಿನಿಂದ ಮುಕ್ತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಕೊರೋನಾ ಉಲ್ಬ​ಣಿ​ಸಿ​ದ್ದು ಆತಂಕಕ್ಕೆ ಕಾರಣವಾಗಿದೆ.

click me!