ಸಿಬ್ಬಂದಿಗೆ ಕೊರೋನಾ ಸೋಂಕು: ಸಿರುಗುಪ್ಪದ PLD ಬ್ಯಾಂಕ್‌ ಸೀಲ್‌ಡೌನ್‌

By Kannadaprabha News  |  First Published Jun 25, 2020, 8:12 AM IST

ಕೊರೋನಾ ಸೋಂಕು ತಗುಲಿದ ವ್ಯಕ್ತಿಯನ್ನು ಬಳ್ಳಾರಿಯ ಕೋವಿಡ್‌-19 ಆಸ್ಪತ್ರೆಗೆ ದಾಖಲು| ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಸುತ್ತಿದ್ದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ 15 ಸಿಬ್ಬಂದಿಗೆ ನಗರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಕ್ವಾರಂಟೈನ್‌| ಪಿಎಲ್‌ಡಿ ಬ್ಯಾಂಕಿನ ಹತ್ತಿರದ 26 ಮನೆಗಳನ್ನು ಸೀಲ್‌ಡೌನ್‌|


ಸಿರುಗುಪ್ಪ(ಜೂ.25): ನಗರದಲ್ಲಿರುವ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಸುತ್ತಿರುವ ಸಿಬ್ಬಂದಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದ್ದು, ಪಿಎಲ್‌ಡಿ ಬ್ಯಾಂಕ್‌ ಅನ್ನು ಮತ್ತು ಪಿಎಲ್‌ಡಿ ಬ್ಯಾಂಕಿನ ಹತ್ತಿರದ 26 ಮನೆಗಳನ್ನು ಬುಧವಾರ ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕು ತಗುಲಿದ ವ್ಯಕ್ತಿಯನ್ನು ಬಳ್ಳಾರಿಯ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟಿಎಚ್‌ಒ ಸುರೇಶ್‌ಗೌಡ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಸುತ್ತಿದ್ದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ 15 ಸಿಬ್ಬಂದಿಯನ್ನು ನಗರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಿಳಿಸಿದರು.

Tap to resize

Latest Videos

ಹರಪನಹಳ್ಳಿ: ವರದಿಗೂ ಮುನ್ನವೇ ಗ್ರಾಮಕ್ಕೆ ಬಂದ ಕೊರೋನಾ ಸೋಂಕಿತ..!

ಗ್ರೇಡ್‌-2 ತಹಸೀಲ್ದಾರ್‌ ವಿಶ್ವನಾಥ, ವೈದ್ಯೆ ಸಿದ್ದಲಿಂಗೇಶ್ವರಿ, ಕಂದಾಯ ನಿರೀಕ್ಷಕ ಮಹಮ್ಮದ್‌ ಸಾಧಿಕ್‌ ಭಾಷಾ, ಹಿರಿಯ ಆರೋಗ್ಯ ಸಹಾಯಕ ಗಿರೀಶ್‌ ಕುಮಾರ್‌, ಗ್ರಾಮ ಲೆಕ್ಕಾಧಿಕಾರಿ ವಿರೂಪಾಕ್ಷಪ್ಪ, ರಾಮಪ್ಪ, ಪರಮೇಶ, ನಗರಸಭೆ ಅಧಿಕಾರಿ ರಂಗಸ್ವಾ​ಮಿ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
 

click me!