ವಂಚನೆ: IMA ಸೇರಿ 65 ಕಂಪನಿಗಳ 137 ಕೋಟಿ ಆಸ್ತಿ ಜಪ್ತಿ

Kannadaprabha News   | Asianet News
Published : Jul 26, 2020, 07:25 AM ISTUpdated : Jul 26, 2020, 09:07 AM IST
ವಂಚನೆ: IMA ಸೇರಿ 65 ಕಂಪನಿಗಳ 137 ಕೋಟಿ ಆಸ್ತಿ ಜಪ್ತಿ

ಸಾರಾಂಶ

ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಬೆಂಗಳೂರು(ಜು.26): ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಶನಿವಾರ ಅವರು ಮಾತನಾಡಿ, ಕಣ್ವ ಕೋ-ಆಪರೇಟಿವ್‌, ಆರ್‌.ಆರ್‌.ವೆಂಚರ್ಸ್‌, ಇನ್ನೋವೇಟಿವ್‌ ಬ್ಯೂಸಿನೆಸ್‌, ದಿವ್ಯ ಸ್ಪಂದನ ಕೋ ಆಪರೇಟಿವ್‌, ಲೋಕಮಾನ್ಯ ಕೋ-ಆಪರೇಟಿವ್‌ ಮತ್ತು ಐಎಂಎ ಕಂಪನಿ ಸೇರಿ 65 ಕಂಪನಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಮಶಾನದ ವ್ಯವಸ್ಥೆ:

ಪ್ರತಿ ಹಳ್ಳಿಯಲ್ಲೂ ಸ್ಮಶಾನದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ದಾಸನಪುರದಲ್ಲಿ 2 ಎಕರೆ, ಉತ್ತರಹಳ್ಳಿಯಲ್ಲಿ 4 ಎಕರೆ, ಜಿಗಣಿಯಲ್ಲಿ 3, ಸರ್ಜಾÜಪುರದಲ್ಲಿ 4, ದೊಡ್ಡಜಾಲದಲ್ಲಿ 1.20 ಎಕರೆ, ಹುಣಸೂರಿನಲ್ಲಿ 1 ಎಕರೆ ಜಾಗವನ್ನು ಗುರುತಿಸಲಾಗಿದೆ.

3-4 ಸಚಿವರ ಕೈಬಿಟ್ಟು ಸಮರ್ಥ ಸಂಪುಟ ಕಟ್ಟಲು ಸಿಎಂ ಚಿಂತನೆ: ಇಲ್ಲಿದೆ ಕ್ಯಾಬಿನೆಟ್ ಲೆಕ್ಕಾಚಾರ!

ಕೋವಿಡ್‌ನಿಂದ ಮೃತಪಟ್ಟರೆ ಸರ್ವಧರ್ಮಕ್ಕೂ ಒಂದೇ ಕಡೆ ಶವ ಸಂಸ್ಕಾರ ಮಾಡಲಾಗುತ್ತದೆ. ಈ ಹಿಂದೆ ಕೊರೋನಾದಿಂದ ಸಾವನ್ನಪ್ಪಿದರೆ 250 ರು. ಶುಲ್ಕ ಪಾವತಿಸಬೇಕಾಗಿತ್ತು. ಆದರೆ, ಈಗ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಹೇಳಿದರು.

ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದರೂ ನಿಲ್ಲದ ಶ್ರೀಗಳ ವ್ರತ, ಪೂಜೆ

ಸಿನಿಮಾ ಚಿತ್ರೀಕರಣ, ಸಿನಿಮಾ ಪ್ರದರ್ಶನಕ್ಕೆ ಇತ್ಯಾದಿಗಳಿಗೆ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟರೆ ರಾಜ್ಯ ಸರ್ಕಾರವು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!