Bengaluru: ಬಿಬಿಎಂಪಿಯಲ್ಲಿ 13,000 ಕೋಟಿ ಹಗರಣ..!

Published : Mar 17, 2022, 06:34 AM IST
Bengaluru: ಬಿಬಿಎಂಪಿಯಲ್ಲಿ 13,000 ಕೋಟಿ ಹಗರಣ..!

ಸಾರಾಂಶ

*  ಕುಮಾರಸ್ವಾಮಿ, ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ *  ಎಸಿಬಿ, ಬಿಎಂಟಿಎಫ್‌ಗೆ ದೂರು *  ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು  

ಬೆಂಗಳೂರು(ಮಾ.17):  ಹಿಂದಿನ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನೇತೃತ್ವದ ಸಮ್ಮಿಶ್ರ ಸರ್ಕಾರ(Coalition Government) ಮತ್ತು ಅದಕ್ಕೂ ಮೊದಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಬಿಬಿಎಂಪಿಯ .13 ಸಾವಿರ ಕೋಟಿ ಮೊತ್ತದ ಕಾಮಗಾರಿಯಲ್ಲಿ ಶೇ.50ಕ್ಕೂ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ (ACB), ಬಿಎಂಟಿಎಫ್‌ಗೆ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್‌.ಆರ್‌.ರಮೇಶ್‌(NR Ramesh) ದೂರು ನೀಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದು ಹಗರಣದಲ್ಲಿ(Scam) ಭಾಗಿಯಾಗಿರುವವರ ವಿರುದ್ಧ ಸಿಐಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ACB Raids: ಕಟ್ಟಡಗಳಿಂದ ತೆರಿಗೆ ಸಂಗ್ರಹಿಸದ ಬಿಬಿಎಂಪಿಗೆ 500 ಕೋಟಿ ನಷ್ಟ

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌, 2015-16ರಿಂದ 2019-20ನೇ ಸಾಲಿನವರೆಗಿನ ಅವಧಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ (KRDL) ಮೂಲಕ ನಿರ್ವಹಿಸುವ ಹೆಸರಲ್ಲಿ ಹಗರಣ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗಿರುವ ವಿವಿಧ ಅನುದಾನಗಳ ಮೊತ್ತವು .13 ಸಾವಿರ ಕೋಟಿ ಅಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ಎಂದು ಹೆಸರಿಸಲ್ಪಡುವ ಒಂದೇ ಒಂದು ಕಾಮಗಾರಿಯೂ ಸಹ ಕಾಣುವುದಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಪಾಲಿಕೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ನಿರ್ವಹಿಸಲಾಗುತ್ತಿದ್ದು, ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿರುವ ಸುಮಾರು .850 ಕೋಟಿ ಮೊತ್ತದ ಕಾಮಗಾರಿಗಳನ್ನು ಹೊರತುಪಡಿಸಿ, ಇನ್ನುಳಿದ .12,150 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಶೇ.50ರಷ್ಟು ಮೊತ್ತವನ್ನು ಕಾಮಗಾರಿಗಳನ್ನು ನಿರ್ವಹಿಸದೆಯೇ ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ. ಕೆಆರ್‌ಡಿಎಲ್‌ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಿರುವ ಸಂಸ್ಥೆಯಾಗಿದೆ. ಆದರೆ, ಇಂತಹ ಒಂದು ಸಂಸ್ಥೆಯ ಮೂಲಕ ಮಹಾನಗರ ಪ್ರದೇಶ/ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು/ ಕಾಮಗಾರಿಗಳನ್ನು ನಿರ್ವಹಿಸುವುದೇ ನಿಯಮ ಬಾಹಿರ ಕಾರ್ಯವಾಗಿದೆ ಎಂದು ದೂರಿದರು.

ಭ್ರಷ್ಟಅಧಿಕಾರಿಗಳು ಮತ್ತು ವಂಚಕ ಜನಪ್ರತಿನಿಧಿಗಳು ಟೆಂಡರ್‌ ಪ್ರಕ್ರಿಯೆಯ ಗೊಡವೆಯೇ ಇಲ್ಲದೇ, ನೇರವಾಗಿ ತಮ್ಮ ಆಪ್ತರಿಗೆ ತಮ್ಮ ತಮ್ಮ ವ್ಯಾಪ್ತಿಯ ಕಾಮಗಾರಿಗಳ ಗುತ್ತಿಗೆಯನ್ನು ಉಪಗುತ್ತಿಗೆದಾರರು ಎಂಬ ಹೆಸರಲ್ಲಿ ಕೊಡಿಸುವ ಕಾನೂನು ಬಾಹಿರ ಕಾರ್ಯಗಳಿಗೆ ಸಂಪರ್ಕ ಕೊಂಡಿಯಾಗಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಇಂತಹ ಉಪಗುತ್ತಿಗೆದಾರರನ್ನು ಕೆಆರ್‌ಐಡಿಎಲ್‌ ಸಂಸ್ಥೆಯು ಗ್ರೂಪ್‌ ಲೀಡರ್‌ ಎಂಬ ಹೆಸರಲ್ಲಿ ಉಲ್ಲೇಖಿಸುತ್ತದೆ ಎಂದರು.

ACB Raids: ಬಿಬಿಎಂಪಿ ಭ್ರಷ್ಟರಿಗೆ ಎಸಿಬಿ ಶಾಕ್‌: 230 ಕೋಟಿ ಹಗರಣ ಪತ್ತೆ

ಈ ಬೃಹತ್‌ ಹಗರಣದಲ್ಲಿ ಭಾಗಿಯಾದ ಕೆಆರ್‌ಡಿಎಲ್‌ ಸಂಸ್ಥೆಯ 6 ಐಎಎಫ್‌ ಅಧಿಕಾರಿಗಳು ಸೇರಿದಂತೆ 62 ಅಧಿಕಾರಿಗಳು ಮತ್ತು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಉಪಗುತ್ತಿಗೆಯನ್ನು ಗ್ರೂಪ್‌ ಲೀಡರ್‌ ಹೆಸರಲ್ಲಿ ಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ರು. ವಂಚಿಸಿರುವ ಎಲ್ಲಾ ಉಪಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಲ್ಲರ ವಿರುದ್ಧ ಕ್ರಿಮಿನಲ್‌ ಪ್ರಕರಣ(Criminal Case) ದಾಖಲಿಸಬೇಕು. ಅಲ್ಲದೇ, ತುರ್ತು ಕಾಮಗಾರಿಗಳನ್ನು ಹೊರತುಪಡಿಸಿ ಇನ್ನಾವುದೇ ವಿಧದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು ಕೆಆರ್‌ಐಡಿಎಲ್‌ ಸಂಸ್ಥೆಗೆ ವಹಿಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ತ್ಯಾಜ್ಯದ ಹಣವನ್ನೂ ತಿಂದು ತೇಗಿದ ಪಾಲಿಕೆ ಭ್ರಷ್ಟರು!

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಹುದುಗಿರುವ ಭ್ರಷ್ಟಬೇರುಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಶೋಧಿಸಿದಷ್ಟುವಿಸ್ತಾರವಾಗಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲಿ ತೆರಿಗೆ, ಜಾಹೀರಾತು ಹಾಗೂ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸುಮಾರು .617 ಕೋಟಿ ಅಕ್ರಮವನ್ನು ಎಸಿಬಿ ಪತ್ತೆ ಹಚ್ಚಿದೆ. ಇದರೊಂದಿಗೆ ಬಿಬಿಎಂಪಿ (Bruhat Bengaluru Mahanagara Palike) ಮೇಲಿನ ಬೃಹತ್‌ ಕಾರ್ಯಾಚರಣೆಯೂ ಅಂತ್ಯಗೊಂಡಿದ್ದು, ಇದುವರೆಗಿನ ತನಿಖೆಯಲ್ಲಿ ಕೋಟ್ಯಂತರ ಮೌಲ್ಯದ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸಿಬಿ (Anti Corruption Bureau) ಹೇಳಿದೆ. ಬುಧವಾರ ಬಿಬಿಎಂಪಿ (BBMP) ಕೇಂದ್ರ ಹಾಗೂ ವಲಯ ಕಚೇರಿಗಳು ಸೇರಿದಂತೆ 33 ಸ್ಥಳಗಳಲ್ಲಿ 200 ಅಧಿಕಾರಿಗಳು ದಾಳಿ ನಡೆಸಿದ್ದರು.
 

PREV
Read more Articles on
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ