ಹಾಸನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 12ರ ಬಾಲಕಿ 14ರ ಪೋರನಿಂದ ಗರ್ಭಿಣಿಯಾಗಿದ್ದಾಳೆ. ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಹೊಳೆನರಸೀಪುರ (ನ.05): 12ರ ಬಾಲಕಿಯೊಬ್ಬಳು 14 ವರ್ಷದ ಬಾಲಕನೊಬ್ಬನಿಂದ ಗರ್ಭಿಣಿಯಾಗಿರುವ ಘಟನೆ ಹಾಸನದ ಹೊಳೆನರಸೀಪುರದಲ್ಲಿ ತಡವಾಗಿ ಬೆಳೆಕಿಗೆ ಬಂದಿದೆ.
6ನೇ ತರಗತಿ ಓದುತ್ತಿರುವ ಬಾಲಕಿಗೆ ಮನೆ ಸಮೀಪವೇ ಇದ್ದ ಕೂಲಿ ಕಾರ್ಮಿಕನ 14 ವರ್ಷದ ಪುತ್ರನ ಜತೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.
ಈಚೆಗೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ದೃಢವಾಗಿದೆ. ಇದರಿಂದ ಕಂಗಾಲಾದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.
ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...
ಈ ವೇಳೆ ಸಂತ್ರಸ್ತ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕ ಪದೇ ಪದೆ ಮನೆಗೆ ಬಂದು ಕೆಟ್ಟದಾಗಿ ವರ್ತಿಸುತ್ತಿದ್ದ, ವಿರೋಧಿಸಿದರೆ ಬೆದರಿಕೆ ಒಡ್ಡುತ್ತಿದ್ದು, ತಂದೆ ತಾಯಿಗೆ ವಿಚಾರ ತಿಳಿಸಲು ಹೆದರಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಪೋಕ್ಸೋ ಕಾಯ್ದೆಯಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.