13 ವರ್ಷದ ಬಾಲಕಿಗೆ 18 ವರ್ಷಗಳ ಬಳಿಕ ಅಂತ್ಯ ಸಂಸ್ಕಾರ: ಇಲ್ಲಿದೆ ಕರುಣಾಜನಕ ಕಥೆ!

By Govindaraj S  |  First Published Nov 13, 2024, 8:53 PM IST

ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿ ಸಫಿಯಾಳ ಅಂತ್ಯ ಸಂಸ್ಕಾರ ನಡೆದಿದೆ. ಹೌದು ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿಯ ಮೊಯ್ದು ಮತ್ತು ಆಯೇಷಾ ದಂಪತಿಗಳ ಪುತ್ರಿ 13 ವರ್ಷದ ಸಫಿಯಾಳನ್ನು ಓದಿಸುವುದಾಗಿ ಕರೆದೊಯ್ದಿದ್ದ.


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.13): ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿ ಸಫಿಯಾಳ ಅಂತ್ಯ ಸಂಸ್ಕಾರ ನಡೆದಿದೆ. ಹೌದು ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿಯ ಮೊಯ್ದು ಮತ್ತು ಆಯೇಷಾ ದಂಪತಿಗಳ ಪುತ್ರಿ 13 ವರ್ಷದ ಸಫಿಯಾಳನ್ನು ಓದಿಸುವುದಾಗಿ ಕರೆದೊಯ್ದಿದ್ದ ಕೇರಳದ ಕಾಸರಗೋಡಿನ ಹಂಝ ಮತ್ತು ಮೈಮೂನಾ ದಂಪತಿ 2006 ರಲ್ಲಿ ಗೋವಾಕ್ಕೆ ಸ್ಥಳಾಂತರವಾಗಿದ್ದರು. ಆ ವೇಳೆ ಸಫಿಯಾಳನ್ನು ಕೂಡ ಗೋವಾಕ್ಕೆ ಕರೆದೊಯ್ದಿದ್ದರು. ಅದಾದ ಕೆಲವೇ ದಿನಗಳಲ್ಲಿ ಸಫಿಯಾಳ ಕೊಲೆಯಾಗಿತ್ತು. ಇದಕ್ಕೂ ಮೊದಲು ಆಗಾಗ ಕೇರಳಕ್ಕೆ ವಾಪಸ್ ಕರೆದು ಬರುತ್ತಿದ್ದ ಮಗಳನ್ನು ನೋಡಿಕೊಂಡು ಬರಲು ಹೋಗಿದ್ದ ಮೊಯ್ದು ಮತ್ತು ಆಯೇಷಾಗೆ ನಿಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಸಫಿಯಾಳ ತಂದೆ ತಾಯಿಗೆ ಸುಳ್ಳು ಹೇಳಿದ್ದರು. 

Latest Videos

undefined

ತಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡುವಂತೆ ಕೊಡಗಿನ ಮೊಯ್ದು ಮತ್ತು ಆಯೇಷಾ ದಂಪತಿ ಪರಿಪರಿಯಾಗಿ ಕೇಳಿದ್ದರು. ಆದರೆ ಮಗಳು ಸಿಗದಿದ್ದಾಗ ಅವರು ನಡೆಸಿದ್ದ ಬರೋಬ್ಬರಿ 90 ದಿನಗಳ ಕಾಲದ ಪ್ರತಿಭಟನೆಗೆ ಮಣಿದಿದ್ದ ಕೇರಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೊಲೀಸರು ಒಂದು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದ್ದರು. ಸಫಿಯಾಳಿಗಾಗಿ ಹುಡುಕಾಡಿದ್ದರೂ ಆಕೆ ಪತ್ತೆಯಾಗಿರಲಿಲ್ಲ. ಒಂದೂವರೆ ವರ್ಷಗಳ ನಂತರ ಕೇರಳ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿ ಸಫಿಯಾಳ ನಾಪತ್ತೆ ನಿಗೂಢವನ್ನು ಭೇದಿಸಿತ್ತು. ಕ್ರೈ ಬ್ರಾಂಚ್ ತನಿಖೆಯಲ್ಲಿ ಸಫಿಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಹಂಝನೇ ಕೊಲೆ ಮಾಡಿದ್ದಾನೆ ಎನ್ನುವುದು ಬಯಲಾಗಿತ್ತು. 

ಜನವರಿಯೊಳಗೆ ಕಾಂಗ್ರೆಸ್ ಸರ್ಕಾರ ಪತನ: ಎಚ್.ಡಿ.ದೇವೇಗೌಡ

ಸಫಿಯಾಳನ್ನು, ಹಂಝ ಕ್ರೂರವಾಗಿ ಹತ್ಯೆ ಮಾಡಿ ಆಕೆಯ ದೇಹವನ್ನು ಮೂರು ಭಾಗಗಳಾಗಿ ತುಂಡರಿಸಿ ನಂತರ ಗೋವಾದ ಅಣೆಕಟ್ಟೆಯೊಂದರ ಬಳಿ ಹೂತಿಟ್ಟಿದ್ದ. ಸಫಿಯಾ ಮನೆ ಕೆಲಸ ಮಾಡುವಾಗ ಬಿಸಿ ಗಂಜಿ ಬಿದ್ದು, ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಳು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಯಾರಾದರು ನೋಡಿದರೆ ಮನೆಯಲ್ಲಿ ಹಿಂಸಿಸಲಾಗಿದೆ ಎಂದು ಬಾಲ ಕಾರ್ಮಿಕ ಪ್ರಕರಣ ದಾಖಲಾಗಬಹುದೆಂದು ಯೋಚಿಸಿ ಹಂಝ, ಆಕೆಯನ್ನು ಕೊಲೆ ಮಾಡಿದ್ದ. ಇದು ಬಯಲಾಗುತ್ತಲೇ 2008 ರಲ್ಲಿ ಹಂಝನನ್ನು ಬಂಧಿಸಲಾಗಿತ್ತು. 

ವಿಚಾರಣೆ ಬಳಿಕ ಜುಲೈ 2015 ರಲ್ಲಿ ಕಾಸರಗೋಡು ಸೆಷನ್ ನ್ಯಾಯಾಲಯ ಹಂಝಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ 2019 ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಅಪರಾಧಿ ಹಂಝಗೆ ಶಿಕ್ಷೆಯಾದರೂ, ಸಫಿಯಾಳ ಅಸ್ತಿಪಂಜರ ಮಾತ್ರ ಕಾಸರಗೋಡು ನ್ಯಾಯಾಲಯದಲ್ಲೇ ಇತ್ತು. ಅದಕ್ಕೆ ಇಸ್ಲಾಂ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ ಶುಕೂರ್ ಮೂಲಕ ಪೋಷಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಅವರು ಅಸ್ತಿ ಪಂಜರ ಹಸ್ತಾಂತರಕ್ಕೆ ಆದೇಶಿಸಿದ್ದರು. ಹೀಗಾಗಿ ಸಫಿಯಾಳ ಅಸ್ತಿ ಪಂಜವರನ್ನು ಕಾಸರಗೋಡಿನ ಮುಹಿಮ್ಮಾತ್ನಲ್ಲಿ ಶುದ್ದಿಗೊಳಿಸಿ ಬಳಿಕ ಕೊಡಗಿನ ಅಯ್ಯಂಗೇರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಿನ್ನೆ ರಾತ್ರಿ ಅಲ್ಲಿನ ಸ್ಮಶಾನದಲ್ಲಿ ದಫನ ಮಾಡಲಾಗಿದೆ. 

ಕೇರಳದಿಂದ ಸ್ವರಾಜ್ಯಗಳತ್ತ ಮುಖ ಮಾಡಿದ ನಕ್ಸಲರು: ಜಾಡು ಹಿಡಿದು ಹೊರಟ ಎಎನ್ಎಫ್-ಪೊಲೀಸರು

ಈ ಮೂಲಕ ದೇಶದ ಗಮನ ಸೆಳೆದಿದ್ದ ಪ್ರಕರಣವೊಂದು ಇತ್ಯರ್ಥಗೊಂಡಂತಾಗಿದೆ. ಏನೇ ಆಗಲಿ ಹದಿಮೂರನೇ ವಯಸ್ಸಿನಲ್ಲಿ ಎಲ್ಲರಂತೆ ಬಡವರಾದ ನಮ್ಮ ಮಗಳು ಇನ್ನೊಬ್ಬರ ಸಹಾಯದಲ್ಲಾದರೂ ಓದಲಿ ಎಂದು ಕಳುಹಿಸಿ 18 ವರ್ಷಗಳ ಬಳಿಕ ಆಕೆಯ ದೇಹದ ಮೂಳೆಗಳನ್ನಷ್ಟೇ ನೋಡಿ ಅಂತ್ಯ ಸಂಸ್ಕಾರ ಮಾಡುವಂತೆ ಆಗಿರುವುದನ್ನು ಕಂಡು ಮೊಯ್ದು ಕುಟುಂಬ ಕಣ್ಣೀರಿಡುತ್ತಿದೆ. ಊರಿನವರ ಸಹಾಯದಿಂದ ಅಯ್ಯಂಗೇರಿಯ ಖಬರಸ್ಥಾನದಲ್ಲಿ ದಫನ್ ಮಾಡಿದೆ. ಏನೂ ತಪ್ಪು ಮಾಡದ ತನ್ನ ಮಗಳನ್ನು ಕ್ರೂರವಾಗಿ ಕೊಲೆ ಮಾಡಿದ ಆ ಕಟುಕರಿಗೆ ಗಲ್ಲು ಶಿಕ್ಷೆಯೇ ಆಗಬೇಕಾಗಿತ್ತು ಎಂದು ಆ ಕುಟುಂಬ ಹಿಡಿ ಶಾಪ ಹಾಕುತ್ತಿದೆ.

click me!