ಬೆಂಗಳೂರಿನ ಈ ಬಡಾವಣೆಗಳಿಗೆ ನಾಳೆ ಕಾವೇರಿ ನೀರು ಬರಲ್ಲ; ನಿಮ್ ಏರಿಯಾ ಇದೆನಾ?

By Sathish Kumar KH  |  First Published Nov 13, 2024, 8:21 PM IST

ಬೆಂಗಳೂರು ಜಲಮಂಡಳಿಯು 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಜಲರೇಚಕ ಯಂತ್ರಗಾರದಿಂದ ಅಮೃತ್ ಕೊಳವೆ ಮಾರ್ಗಕ್ಕೆ ಜೋಡಣೆ ಕಾರ್ಯ ಹಮ್ಮಿಕೊಂಡಿದೆ. ಈ ಕಾರಣದಿಂದಾಗಿ ನವೆಂಬರ್ 13 ಮತ್ತು 14 ರಂದು ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


ಬೆಂಗಳೂರು (ನ.13): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 110 ಹಳ್ಳಿ ವ್ಯಾಪ್ತಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಜಿ.ಕೆ.ವಿ.ಕೆ ಆವರಣದಲ್ಲಿರುವ ಜಲರೇಚಕ ಯಂತ್ರಗಾರದಿಂದ ಅಮೃತ್ ಕೊಳವೆ ಮಾರ್ಗಕ್ಕೆ ಜೋಡಣೆ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ನ.13ರ ರಾತ್ರಿ 8 ಗಂಟೆಯಿಂದ ನಾಳೆ ನ.14ರ ರಾತ್ರಿ 9 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ರಾಜು ಕಾಲೋನಿ, ಸರ್ವೋದಯ ನಗರ, ಇಬ್ರಾಹಿಮ್ ಸ್ಟ್ರೀಟ್-1 ರಿಂದ 9ನೇ ರಸ್ತೆ, ನೋಬೆಲ್ ಸ್ಕೂಲ್ -1 ಮತ್ತು 2ನೇ ಅಡ್ಡರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೇ ಗೇಟ್-1 ಮತ್ತು 2ನೇ ಅಡ್ಡರಸ್ತೆ, ವೈಯಾಲಿಕಾವಲ್ ಲೇಔಟ್-1ರಿಂದ 9ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್-1ರಿಂದ 3ನೇ ಅಡ್ಡರಸ್ತೆ, ವೀರಣ್ಣ ಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೇ ಗೇಟ್, ವೈಯಾಲಿ ಕಾವಲ್ ಲೇಔಟ್ -10 ರಿಂದ 16ನೇ ಅಡ್ಡರಸ್ತೆ , ಪ್ರಕೃತಿ ಲೇಔಟ್ ,ಗುಂಡುತೋಪು, ಆಯಿಲ್ ಮಿಲ್ ರಸ್ತೆ(1 to 15th Crcross lower side),  16ರಿಂದ 18ನೇ ಅಡ್ಡರಸ್ತೆ(1 to 15th cross upper side), 3ನೇ ಬ್ಲಾಕ್ ಸರ್ವೀಸ್ ರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, ಆರ್.ಎಸ್ ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯ ಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆ.ಹೆಚ್.ಬಿ. ಕ್ವಾಟ್ರಸ್, ಓ.ಎಂ.ಬಿ.ಆರ್ ಲೇಔಟ್, ಹೆಣ್ಣೂರು, ರಾಮಸ್ವಾಮಿ ಪಾಳ್ಯ, ಗುರುಮೂರ್ತಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿದೆ.

Tap to resize

Latest Videos

click me!