ದೂರವಾಣಿ ಕರೆಗೆ ಸ್ಪಂದಿಸಿ, ಬಸ್‌ಗೆ ಚಾಲನೆ ನೀಡಿದ ಶಾಸಕ

By Kannadaprabha NewsFirst Published Jul 9, 2023, 5:38 AM IST
Highlights

ಕುಣಿಗಲ್‌ ಪಟ್ಟಣದಿಂದ ಜೋಡಿ ಹೊಸಹಳ್ಳಿ ಮುಖಾಂತರ ಮಾಗಡಿಗೆ ಸಂಚರಿಸಲು ಬಸ್‌ ಸಮಸ್ಯೆ ಇದೆ ಎಂದು ಹಲವಾರು ಸ್ಥಳೀಯರು ಶಾಸಕ ರಂಗನಾಥ್‌ಗೆ ದೂರವಾಣಿ ಮುಖಾಂತರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

 ಕುಣಿಗಲ್‌ ;  ಕುಣಿಗಲ್‌ ಪಟ್ಟಣದಿಂದ ಜೋಡಿ ಹೊಸಹಳ್ಳಿ ಮುಖಾಂತರ ಮಾಗಡಿಗೆ ಸಂಚರಿಸಲು ಬಸ್‌ ಸಮಸ್ಯೆ ಇದೆ ಎಂದು ಹಲವಾರು ಸ್ಥಳೀಯರು ಶಾಸಕ ರಂಗನಾಥ್‌ಗೆ ದೂರವಾಣಿ ಮುಖಾಂತರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಪಟ್ಟಣದಿಂದ ಬಸ್‌ಗೆ ಚಾಲನೆ ನೀಡಿ ನಂತರ ಬಸ್‌ನಲ್ಲಿ ಪ್ರಯಾಣಿಸಿದ ಶಾಸಕರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರು ಬೆಳೆಯುವ ಹೂ ತರಕಾರಿ ಸೇರಿದಂತೆ ಇತರ ಉತ್ಪನ್ನಗಳ ಸಾಗಾಟಕ್ಕೆ ತೊಂದರೆ ಆಗುತ್ತಿತ್ತು. ಈ ಸಮಸ್ಯೆಯನ್ನು ಸ್ಥಳೀಯ ಹಲವಾರು ರೈತರು, ವಿದ್ಯಾರ್ಥಿಗಳು ನನಗೆ ಫೋನ್‌ ಮುಖಾಂತರ ಮನವರಿಕೆ ಮಾಡಿಕೊಟ್ಟಿದ್ದರು. ಆದ್ದರಿಂದ ಸಂಬಂಧಪಟ್ಟಅಧಿಕಾರಿಗಳ ಸಹಕಾರದಿಂದ ಬಸ್‌ ಸಂಪರ್ಕ ಕಲ್ಪಿಸಲಾಗಿದೆ. ಸಾರ್ವಜನಿಕರು ಸರಿಯಾದ ರೀತಿ ಬಳಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಬೇಗೂರು ನಾರಾಯಣ ಸೇರಿದಂತೆ ಹಲವಾರು ಕಾಂಗ್ರೆಸ್‌ ಮುಖಂಡರು ಇದ್ದರು

ಇದು ಶಕ್ತಿಯಜನೆ ಎಫೆಕ್ಟ್ 

ಕಲಬುರಗಿ(ಜು.06):  ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಕಲಬುರಗಿ ಕೇಂದ್ರವಾಗಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಆರ್ಥಿಕವಾಗಿ ಅಶಕ್ತವಾಗಿಸಿದೆಯೆ? ಎಂಬ ಪ್ರಶ್ನೆ ಕಾಡತೊಡಗಿದೆ. ಈ ಸಂಸ್ಥೆ ತಿಂಗಳ ಮೊದಲ ದಿನವೇ (1ನೇ ತಾರೀಖು) ತನ್ನೆಲ್ಲ 19 ಸಾವಿರದಷ್ಟುಸಿಬ್ಬಂದಿಗೆ ವೇತನ ಪಾವತಿಸುತ್ತಿತ್ತು, ಆದರೆ ಈ ಬಾರಿ ಜುಲೈ ತಿಂಗಳು ಮೊದಲ ವಾರ ಉರುಳಿದರೂ ಕೂಡಾ ಇನ್ನೂ ಜೂನ್‌ ತಿಂಗಳ ವೇತನ ಸಿಬ್ಬಂದಿ ಕೈ ಸೇರಿಲ್ಲ!

ಈ ಬೆಳವಣಿಗೆ ಸಿಬ್ಬಂದಿಗಳನ್ನು ಕಂಗಾಲಾಗಿಸಿದೆ, ಅನೇಕರು ಮಾಸಿಕ ಖರ್ಚು- ವೆಚ್ಚ ಸರಿದೂಗಿಸಲು, ತಮ್ಮೆಲ್ಲ ವಹಿವಾಟು ಸುರಳೀತಗೊಳಿಸಲು ಹೆಣಗುವಂತಾಗಿದೆ. ಪಗಾರ ವಿಳಂಬಕ್ಕೆ ಶಕ್ತಿ ಯೋಜನೆಯೇ ಕಾರಣವೆಂದು ದೂರುತ್ತಿದ್ದಾರೆ. ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಸ್ಥೆಗಳಲ್ಲಿ ಅದಾಗಲೇ 1ನೇ ತಾರೀಖಿಗೆ ಅವರವರ ಪಗಾರ ಪಾವತಿಯಾಗಿದೆ, ಆದರೆ ಕೆಕೆಆರ್‌ಟಿಸಿಯಲ್ಲಿ ಮಾತ್ರ ಪಗಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ ಎಂದು ಗೋಳಾಡುತ್ತಿದ್ದಾರೆ.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಹೆಚ್ಚಿದ ವರಮಾನ- ಖಜಾನೆಗಿಲ್ಲ ಹಣ:

ಕಲ್ಯಾಣ ನಾಡಿನ ಕಲಬುರಗಿ ಸೇರಿದಂತಿರುವ 8 ಜಿಲ್ಲೆಗಳ ವ್ಯಾಪ್ತಿಯ ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಶಕ್ತಿ ಯೋಜನೆ ಜಾರಿಗೊಂಡಾಗಿನಿಂದ ಮಹಿಳೆಯರ ಪ್ರಯಾಣ ವಿಪರೀತ ಹೆಚ್ಚಿದೆ, ಮೊದಲೆಲ್ಲಾ ಟಿಕೆಟ್‌ ಇದ್ದಾಗ ನಿತ್ಯ 4ರಿಂದ 4.55 ಕೋಟಿ ರು. ಖಜಾನೆ ಸೇರುತ್ತಿತ್ತು. ಈಗ ಶೇ.70ರಷ್ಟುಶಕ್ತಿ ಯೋಜನೆಯ ವರಮಾನವೇ ಆಗಿರೋದರಿಂದ ಶೂನ್ಯ ಟಿಕೆಟ್‌ ಪಡೆದೇ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.ಸಂಸ್ಥೆಯ ವರಮಾನ ನಿತ್ಯ 5.88 ಕೋಟಿ ರು.ಗೆ ಹೆಚ್ಚಿದೆಯಾದರೂ ಖಜಾನೆಗೆ ಅಷ್ಟೂಹಣ ಸೇರುತ್ತಿಲ್ಲ.

ಈ ರೀತಿಯ ಉಚಿತ ಸೇವೆಗೆ ಪ್ರತಿಯಾಗಿ ಸರ್ಕಾರದಿಂದ ಹಣಸಂಸ್ಥೆಗೆ ಬರಬೇಕು. ಹೀಗೆ ಹಣ ಬಂದರಷ್ಟೇ ಸಂಸ್ಥೆಗೆ ಅನುಕೂಲ, ಇಲ್ಲದೆ ಹೋದಲ್ಲಿ ಮೊದಲೇ ಆರ್ಥಿಕವಾಗಿ ತೊಂದರೆಯಲ್ಲಿರುವ ಕೆಕೆಆರ್‌ಟಿಸಿಗೆ ಈ ಯೋಜನೆ ಇನ್ನೂ ಅಶಕ್ತಗೊಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಪಗಾರ ಇಲ್ಲದೆ ಸಿಬ್ಬಂದಿ ಪರದಾಟ:

ಕೆಕೆಆರ್‌ಟಿಸಿ ವ್ಯಾಪ್ತಿಯ ಕಲಬುರಗಿ, ಬೀದರ್‌, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ವಿಜಯಪೂರ ಜಿಲ್ಲೆಗಳಲ್ಲಿ ಸಂಸ್ಥೆಯ 4 ಸಾವಿರಕ್ಕೂ ಹೆಚ್ಚು ಬಸ್‌ಗಳಿವೆ, 18,200ರಷ್ಟುಚಾಲಕ, ನಿರ್ವಾಹಕ, ಮೆಕ್ಯಾನಿಕ್‌ ಸೇರಿದಂತೆ ವಿವಿಧ ಹುದ್ದೆಗಳ ಸಿಬ್ಬಂದಿಗಳಿದ್ದಾರೆ. ಶಕ್ತಿ ಯೋಜನೆಗೂ ಮುನ್ನ 2214 ಟ್ರಿಪ್‌ಗಳಿದ್ದದ್ದು ಯೋಜನೆ ಜಾರಿ ಬಳಿಕ 2370 ಟ್ರಿಪ್‌ಗಳಿಗೆ ಹೆಚ್ಚಿದೆ. 19 ಸಾವಿರದಷ್ಟುಸಿಬ್ಬಂದಿಗೆ ಮಾಸಿಕ ವೇತನವಂತೂ ನೀಡಲೇಬೇಕು. ಆದರೆ ಈ ಬಾರಿ ವೇತನ 1ನೇ ತಾರೀಖಿಗೆ ನೀಡಲಾಗದೆ ಸಂಸ್ಥೆ ಸಿಬ್ಬಂದಿಗಳನ್ನು ಕಂಗಾಲಾಗಿಸಿದೆ. 1ನೇ ತಾರೀಖಿನ ಪಗಾರದ ಲೆಕ್ಕದಲ್ಲೇ ಸಿಬ್ಬಂದಿ ತಮ್ಮೆಲ್ಲ ವ್ಯವಹಾರ ಹೊಂದಿಸಿಕೊಂಡಿರುತ್ತಾರೆ. ಇದೀಗ ವೇತನ ವಿಳಂಬವಾಗಿರೊದರಿಂದ ಸಿಬ್ಬಂದಿ ಗೋಳಾಡುತ್ತಿದ್ದಾರೆ. ಅನೇಕರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮ್ಮ ಸಾಲದ ಕಂತು, ಕಿರಾಣಿ, ಶಾಲೆ- ಕಾಲೇಜುಗಳ ಮಕ್ಕಳ ಶುಲ್ಕ , ಮನೆ ಬಾಡಿಗೆ ಇತ್ಯಾದಿಗಳಿಗೂ ಪರದಾಡುವಂತಾಗಿದೆ ಎಂದು ಗೋಳಾಡಿದ್ದಾರೆ.

ಶಕ್ತಿ ಯೋಜನೆಯಿಂದ ನಷ್ಟವಾದ ಆಟೋ ಚಾಲಕರಿಗೆ ನೆರವು: ಸಚಿವ ರಾಮಲಿಂಗಾರೆಡ್ಡಿ

click me!