Covid Crisis: ಕೊರೋನಾ ಸೋಂಕಿಗೆ 12 ವರ್ಷದ ಬಾಲಕಿ ಬಲಿ

By Girish GoudarFirst Published Mar 24, 2022, 9:17 AM IST
Highlights

*  ಬೆಂಗಳೂರಿನಲ್ಲಿ ಸತತ ಮೂರನೇ ದಿನ 100ಕ್ಕಿಂತ ಕಡಿಮೆ ಕೇಸ್‌
*  ಶೇ.0.8ರಷ್ಟು ಪಾಸಿಟಿವಿಟಿ ದರ ದಾಖಲು
*  11582 ಸಾವಿರ ಕೋವಿಡ್‌ ಪರೀಕ್ಷೆ 

ಬೆಂಗಳೂರು(ಮಾ.24): ರಾಜಧಾನಿಯಲ್ಲಿ ಕೊರೋನಾ ಸೋಂಕಿಗೆ 12 ವರ್ಷದ ಬಾಲಕಿ ಸಾವಿಗೀಡಾಗಿರುವುದು ಬುಧವಾರ ವರದಿಯಾಗಿದೆ. ನಗರದಲ್ಲಿ ಬುಧವಾರ 75 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 92 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1613 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 11582 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.8ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ.

ಕೊರೋನಾ ಸೋಂಕು ತಗುಲಿದ ಹಿನ್ನೆಲೆ ಮಾ.5ರಂದು ನಗರದ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕಿ ತೀವ್ರ ಉಸಿರಾಟ ಸಮಸ್ಯೆಯಿಂದ ಮಾ.7ರಂದು ಮೃತಪಟ್ಟಿದ್ದು, ಬುಧವಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸತತ ಮೂರನೇ ದಿನ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. 

ಕೋವಿಡ್‌ ಸುರಕ್ಷತೆ ಹೊರತಾಗಿ ಎಲ್ಲ ನಿರ್ಬಂಧ ಮಾ. 31ರಿಂದ ರದ್ದು

ಸದ್ಯ ಸಕ್ರಿಯ ಸೋಂಕಿತರ ಪೈಕಿ 33 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇದರಲ್ಲಿ ಏಳು ಮಂದಿ ವೆಂಟಿಲೇಟರ್‌ನಲ್ಲಿ, ಏಳು ಮಂದಿ ಐಸಿಯುನಲ್ಲಿ, ಒಬ್ಬರು ಆಕ್ಸಿಜನ್‌, ಸಾಮಾನ್ಯ ಹಾಸಿಗೆಗಳಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.81 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.62 ಲಕ್ಷಕ್ಕೆ, ಸಾವಿನ ಸಂಖ್ಯೆ 16,955ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ 4ನೇ ಅಲೆ ಬಗ್ಗೆ ಸಚಿವ ಸುಧಾಕರ್‌ ಹೇಳಿದ್ದಿಷ್ಟು

ಬೆಂಗಳೂರು: ದೇಶದಲ್ಲಿ ಕೊರೋನಾ(Coronavirus) ನಾಲ್ಕನೇ ಅಲೆ ಆಗಸ್ಟ್‌ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ಐಐಟಿ ಸಂಸ್ಥೆ ನೀಡಿದ್ದರೂ, ಉತ್ತಮವಾಗಿ ಲಸಿಕಾರಣ ನಡೆದಿರುವುದರಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದ್ದರು. 

ಕೊರೋನಾ ರೂಪಾಂತರಿ ತಳಿ ಬಿಎ2(BA2) ಫಿಲಿಫೈನ್ಸ್‌(Philippines) ದೇಶದಲ್ಲಿ ಕಾಣಿಸಿಕೊಂಡು ಈಗ ವಿಶ್ವದ(World) 40 ದೇಶಗಳಲ್ಲಿ ಹರಡಿದೆ. ನಮ್ಮ ದೇಶದಲ್ಲಿ ಬರುವ ಆಗಸ್ಟ್‌ನಲ್ಲಿ ಕಾಣಿಸಕೊಳ್ಳಬಹುದೆಂದು ಐಐಟಿ ಸಂಸ್ಥೆ ತಜ್ಞರು ಊಹಿಸಿದ್ದಾರೆ. ರಾಜ್ಯದಲ್ಲಿ(Karnataka) 4.97 ಕೋಟಿ ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ 4.69 ಕೋಟಿ ನೀಡಲಾಗಿದೆ. 15-17 ವಯಸ್ಸಿನವರಿಗೆ 19.59 ಲಕ್ಷ ಹಾಗೂ 12-14 ವಯಸ್ಸಿನ ಮಕ್ಕಳಿಗೆ 1.18 ಲಕ್ಷ ಡೋಸ್‌ ನೀಡಲಾಗಿದೆ. ಮೂರನೇ ಡೋಸ್‌ ಅನ್ನು ಶೇ. 55 ಜನರಿಗೆ ನೀಡಲಾಗಿದೆ ಎಂದು ಹೇಳಿದ್ದರು.

Fake Covid Claims: ಕೋವಿಡ್‌ ಪರಿಹಾರಕ್ಕಾಗಿ ನಕಲಿ ದಾಖಲೆ, ಅಧಿಕಾರಿಗಳೂ ಸಾಥ್‌!

ಶೂನ್ಯವೇಳೆಯಲ್ಲಿ ಬಿಜೆಪಿಯ(BJP) ಶಶೀಲ್‌ ನಮೋಶಿ ಅವರ ಮಾಡಿದ ಪ್ರಸ್ತಾವನೆಗೆ ಉತ್ತರಿಸಿದ ಅವರು, ಕೊರೋನಾ ಮೊದಲೆರಡು ಅಲೆಗಳಿಂದ ಕಲಿತ ಅನುಭವದ ಮೇಲೆ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ(Health System) ಸಾಕಷ್ಟುಸುಧಾರಣೆ ಮಾಡಲಾಗಿದೆ. 55 ಸಾವಿರ ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯ ಹೊಂದಲಾಗಿದೆ. ಆಮ್ಲಜನಕ ಉತ್ಪಾದನಾ ಸಾಮರ್ಥ್ಯ 300 ಮೆಟ್ರಿಕ್‌ ಟನ್‌ ಇದ್ದದ್ದು ಈಗ 1170 ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ. 255 ಕೊರೋನಾ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ನಿತ್ಯ 2.50 ಲಕ್ಷ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.

750 ಪಿಎಚ್‌ಸಿ ಉನ್ನತೀಕರಣ:

ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahim) ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವ ಡಾ.ಕೆ.ಸುಧಾಕರ್‌, 2021-22ನೇ ಸಾಲಿನ ಅಮೃತ ಆರೋಗ್ಯ ಮೂಲಭೂತ ಸೌಲಭ್ಯ ಉನ್ನತೀಕರಣ ಯೋಜನೆಯಡಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯಗಳ ಉನ್ನತೀಕರಣ ಕಾಮಗಾರಿಯನ್ನು 150 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಡಿ ಪ್ರತಿ ಜಿಲ್ಲೆಗೆ 25 ಪ್ರಾಥಮಿಕ ಕೇಂದ್ರಗಳಿಗೆ ತಲಾ 20 ಲಕ್ಷ ರು. ಮೊತ್ತದಲ್ಲಿ ಅಭಿವೃದ್ಧಿಗೊಳಲಾಗುತ್ತಿದೆ ಎಂದು ಹೇಳಿದ್ದರು. 

ಪ್ರಸ್ತುತ ರಾಜ್ಯದಲ್ಲಿ 32 ದ್ರವೀಕೃತ ವೈದ್ಯಕೀಯ ಆಮ್ಲಜನಕ ಟ್ಯಾಂಕ್‌ಗಳು ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಅಳವಡಿಸಲಾಗಿದೆ. 246 ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. 15,139 ಆಮ್ಲಜನಕ ಸಿಲಿಂಡರ್‌ಗಳು, 9000 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದರು. 
 

click me!