ಪೊನ್ನಂಪೇಟೆ, ಕುಶಾಲನಗರ ಸೇರಿ ಮತ್ತೆ 12 ಹೊಸ ತಾಲೂಕು ರಚನೆ

By Kannadaprabha News  |  First Published Mar 5, 2020, 8:37 AM IST

ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ಕುಶಾಲನಗರ ಪಟ್ಟಣಗಳನ್ನು ಒಳಗೊಂಡಂತೆ 12 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.


ಮಡಿಕೇರಿ(ಮಾ.05): ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ಕುಶಾಲನಗರ ಪಟ್ಟಣಗಳನ್ನು ಒಳಗೊಂಡಂತೆ 12 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಂ.ಪಿ.ಸುನೀಲ್‌ ಸುಬ್ರಮಣಿ ಅವರು, ಕೊಡಗು ಜಿಲ್ಲೆಗೆ ಹೊಸ ತಾಲೂಕುಗಳ ಘೋಷಣೆಯಾಗಿದ್ದು, ಅವುಗಳು ಯಾವಾಗ ಕಾರ್ಯಾರಂಭ ಮಾಡುತ್ತವೆ, ಕಾರ್ಯಾರಂಭಕ್ಕೆ ಕಾಲಮಿತಿ ಏನು ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

Tap to resize

Latest Videos

ಮಂಗಳೂರು ಗೋಲಿಬಾರ್‌: ಪೊಲೀಸ್‌ ಕಮಿಷನರ್‌ಗೆ ನೋಟಿಸ್‌

2019-20ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ಕುಶಾಲನಗರ ಪಟ್ಟಣಗಳನ್ನು ಒಳಗೊಂಡಂತೆ 12 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ನೂತನ ತಾಲೂಕುಗಳಲ್ಲಿ ಹೊಸ ಕಚೇರಿ ತೆರೆಯಲು ಮತ್ತು ಇತರೆ ಇಲಾಖೆಗಳು, ತಾಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಹಂತ ಹಂತವಾಗಿ ತೆರೆಯಲು ಅನುಮತಿ ನೀಡಲಾಗಿದೆ ಎಂದರು.

ಈ ತಾಲೂಕುಗಳ ವ್ಯಾಪ್ತಿಗೆ ಯಾವ ಯಾವ ಗ್ರಾಮಗಳನ್ನು ಸೇರಿಸಬೇಕು ಎಂಬ ಕುರಿತು ಹಿಂದಿನ ತಾಲೂಕು ಪುನರ್‌ ರಚನೆ ಸಮಿತಿಯ ಶಿಫಾರಸ್ಸು ಹಾಗೂ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿ ವರದಿ ನೀಡುವಂತೆ ಕೊಡುಗೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿತ್ತು. ಪೊನ್ನಂಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸ್ವೀಕೃತವಾಗಿದೆ. ಈ ವರದಿಯನ್ನಾಧರಿಸಿ ಪ್ರತ್ಯೇಕವಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

ಕರ್ನಾಟಕ ಬಜೆಟ್ 2020: 'ಮಹದಾಯಿಗೆ ಕನಿಷ್ಠ 1000 ಕೋಟಿ ಮೀಸಲಿಡಲಿ'

ಕುಶಾಲ ನಗರ ತಾಲೂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕೃತವಾದ ಬಳಿಕ ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲಾಗುವುದು. ಈ ನೂತನ ತಾಲೂಕುಗಳಿಗೆ ಅಂತಿಮ ಅಧಿಸೂಚನೆ ನಂತರ ಆಯವ್ಯಯದಲ್ಲಿ ಒದಗಿಸುವ ಅನುದಾನವನ್ನು ಆಧರಿಸಿ ಬಿಡುಗಡೆ ಮಾಡುವುದಾಗಿ ಹೇಳಿದರು.

click me!