Covid 19 Spike: ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೋನಾ ಬ್ಲಾಸ್ಟ್!

By Suvarna NewsFirst Published Jan 8, 2022, 8:20 PM IST
Highlights

*ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ
*ರ‍್ಯಾಪಿಡ್ ಟೆಸ್ಟ್‌ಗೆ  ಒಳಪಟ್ಟಿದ್ದ 12 ವಿದ್ಯಾರ್ಥಿನಿಯರಿಗೆ ಕೋವಿಡ್
*ಮುಂಜಾಗ್ರತಾ ಕ್ರಮವಾಗಿ ಸೈನಿಕ ವಸತಿ ಶಾಲೆ ಸೀಲ್‌ಡೌನ್‌ಗೆ ಸಿದ್ಧತೆ 

ಬೆಳಗಾವಿ (ಜ. 8): ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ (Belagavi Sainik School) ಶಾಲೆಯಲ್ಲಿನ ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು (Covid 19) ಕಾಣಿಸಿಕೊಂಡಿದೆ. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ15 ರಿಂದ 18 ವರ್ಷದ 12 ವಿದ್ಯಾರ್ಥಿನಿಯರಿಗೆ ಕೊರೊನಾ ದೃಢಪಟ್ಟಿದೆ. ಸೈನಿಕ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿದ್ದ ಬೆನ್ನಲ್ಲೇ 102 ವಿದ್ಯಾರ್ಥಿನಿಯರಿಗೆ  ಆರೋಗ್ಯ ಇಲಾಖೆ ಸಿಬ್ಬಂದಿ ರ‍್ಯಾಪಿಡ್ ಟೆಸ್ಟ್ ಮಾಡಿದ್ದರು. 

ರ‍್ಯಾಪಿಡ್ ಟೆಸ್ಟ್‌ಗೆ (Rapid Test) ಒಳಪಟ್ಟಿದ್ದ 102 ವಿದ್ಯಾರ್ಥಿನಿಯರ ಪೈಕಿ  12 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ 102 ವಿದ್ಯಾರ್ಥಿನಿಯರ ಥ್ರೋಟ್ ಸ್ವ್ಯಾಬ್ (Swab) ಸಂಗ್ರಹ ಮಾಡಲಾಗಿದ್ದು RT-PCR ಟೆಸ್ಟ್‌ಗೆ ಬೆಳಗಾವಿಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ಕೊರೋನಾ ಕೇಸ್‌ ದೃಡಪಡುತ್ತಿದ್ದಂತೆ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಸೀಲ್‌ಡೌನ್‌ಗೆ (Seal Down) ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: Corona Update : ಹಾಸನ, ಮಂಡ್ಯ, ತುಮಕೂರಿನಲ್ಲಿ ಹೆಚ್ಚಿದ ಕರೋನಾ ಆತಂಕ!

ರಾಜ್ಯದಲ್ಲಿ ಇಂದು 8906 ಹೊಸ ಕೊರೋನಾ ಪ್ರಕರಣಗಳು ದೃಡಪಟ್ಟಿದ್ದು 508 ಕೊರೋನಾ ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಇಂದು 4 ಜನ ಕೊರೋನಾಗೆ ಬಲಿಯಾಗಿದ್ದು ರಾಜ್ಯದ ಪಾಸಿಟಿವಿಟಿ ದರ 5.42% ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 38507 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಫೆಬ್ರವರಿಯಲ್ಲಿ ಶಾಲಾ-ಕಾಲೇಜು ಬಂದ್?

ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಲ್ಲಿ ಭೌತಿಕ ತರಗತಿಗಳನ್ನು ನಡೆಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಹೀಗಾಗಿ ಶಾಲೆಗಳನ್ನು (Schools) ನಡೆಸುವ ಸಂಬಂಧ ಪರಿಸ್ಥಿತಿಗೆ ಅನುಗುಣವಾಗಿ ತಾಲೂಕು ಹಂತದಲ್ಲೇ ಸ್ಥಳೀಯವಾಗಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌(BC Nagesh) ಹೇಳಿದ್ದಾರೆ.

ಇದನ್ನೂ ಓದಿ: Omicron Threat: 1 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ

ಬೇರೆ ಜಿಲ್ಲೆಗಳಲ್ಲೂ ಶಾಲಾ​​​​​​-ಕಾಲೇಜುಗಳು ಬಂದ್ ಆಗುತ್ತಾ ಎನ್ನುವ ಗೊಂದಲದಲ್ಲಿ ಪೋಷಕರು ಇದ್ದಾರೆ. ಈ ಬಗ್ಗೆ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ನಾಗೇಶ್​,   ಜಿಲ್ಲೆ, ತಾಲೂಕುಗಳಲ್ಲಿ ಕೇಸ್​ ಹೆಚ್ಚಾದ್ರೆ ಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್​ಗಳು ನಿರ್ಧಾರ ಮಾಡುತ್ತಾರೆ. ಕೇಸ್​ ಶೇ.2ಕ್ಕಿಂತ ಹೆಚ್ಚಾದ ಕಡೆ ವಿದ್ಯಾಗಮ ಮೂಲಕ ಕಲಿಸುತ್ತೇವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಫೆಬ್ರವರಿಯಲ್ಲಿ ಕೊರೋನಾ ಜಾಸ್ತಿ ಆಗುತ್ತೆ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ ಹೆಚ್ಚಾದರೆ SSLC ಪರೀಕ್ಷೆ ಬಗ್ಗೆಯೂ ಚರ್ಚಿಸುತ್ತೇವೆ ಮತ್ತು ವಿದ್ಯಾರ್ಥಿಗಳಿಗೆ ಕರೆಂಟ್ ಸಮಸ್ಯೆ ಆಗದಂತೆ ಬೆಸ್ಕಾಂ ಜತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಾಲ್ವರು ಜಡ್ಜ್‌ಗೆ ಕೊರೋನಾ ದೃಢ!

ದೇಶದಲ್ಲಿ ಕೊರೋನಾ ವೈರಸ್(Coronavirus) ಹೆಚ್ಚಳವಾಗಿದೆ. ಒಂದೊಂದೆ ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕೊರೋನಾ ಆರ್ಭಟ ಕಡಿಮೆಯಾಗಿಲ್ಲ. ಇದರ ನಡುವೆ ಸುಪ್ರೀಂ ಕೋರ್ಟ್(Supreme Court) ನಾಲ್ವರು ನ್ಯಾಯಾಧೀಶರಿಗೆ(Judge) ಕೊರೋನಾ ವೈರಸ್ ಅಂಟಿಕೊಂಡಿದೆ. ಇದರಲ್ಲಿ ಓರ್ವ ನ್ಯಾಯಾಧೀಶರು ಚಿಕಿತ್ಸೆಗಾಗಿ ಆಸ್ಪತ್ರೆ(Hospitalization) ದಾಖಲಾಗಿದ್ದರೆ, ಇನ್ನುಳಿದ ಮೂವರು ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ನ್ಯಾಯಾಧೀಶರಿಗೆ ಕರೋನಾ ಕಾಣಿಸಿಕೊಂಡಿರುವುದು ಇದೀಗ ಆತಂಕ ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ಕಾಣಿಸಿಕೊಂಡ ನಾಲ್ವರು ನ್ಯಾಯಾಧೀಶರು ಆರೋಗ್ಯವಾಗಿದ್ದಾರೆ. ಒರ್ವ ನ್ಯಾಯಾಧೀಶರು ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ಹೆಚ್ಚಿನ ಮುತುವರ್ಜಿ ವಹಿಸಿದರೂ ಕೊರೋನಾ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

click me!