Weeked Curfew ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗ್ಳೂರು ರೌಂಡ್ಸ್, ಪ್ರಶ್ನೆ ಕೇಳಿದ ಪುಟ್ಟ ಮಕ್ಕಳು

By Suvarna News  |  First Published Jan 8, 2022, 7:42 PM IST

* ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ
* ಬೆಂಗಳೂರು ಸಿಟಿ ರೌಂಡ್ಸ್ ಹಾಕಿದ ಆರಗ ಜ್ಞಾನೇಂದ್ರ
* ಕಾಂಗ್ರೆಸ್ ಪಾದಯಾತ್ರೆಗೆ ಕ್ರಮದ ಎಚ್ಚರಿಕೆ


ಬೆಂಗಳೂರು, (ಜ.08): ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra)  ಅವರು ಪೊಲೀಸ್ ಅಧಿಕಾರಿಗಳ ಜೊತೆ ಬೆಂಗಳೂರು ಸಿಟಿ ರೌಂಡ್ಸ್ (Bengaluru City) ಹಾಕಿದ್ದಾರೆ. 

ಇಂದು(ಶನಿವಾರ) ಸಂಜೆ 5 ಗಂಟೆಯಿಂದ  ಗೊರಗುಂಟೆಪಾಳ್ಯ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್, ಜೆಪಿ ನಗರ, ಡೈರಿ ಸರ್ಕಲ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಹಡ್ಸನ್ ವೃತ್ತ ಮತ್ತು ಮೆಜೆಸ್ಟಿಕ್​ಗೆ ತೆರಳಿ ವೀಕೆಂಡ್ ಕರ್ಫ್ಯೂ (Weekend Curfew) ಹೇಗಿದೆ ಎಂದು ಪರಿಶೀಲನೆ ನಡೆಸಿದರು.

Latest Videos

undefined

Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ,  ಜಂಕ್ಷನ್‌ನಲ್ಲಿ ನಿಂತಿದ್ದ ಪ್ರಯಾಣಿಕರನ್ನ ಮಾತಾಡಿಸಿದ್ದಾರೆ. ಕರ್ಫ್ಯೂ ಇದೆ ಏಕೆ ಬಂದಿದ್ದೀರಿ ಎಂದು ಕೇಳಿದ್ದಾರೆ.  ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ ಸಾಥ್‌ ನೀಡಿದರು.

ಗೃಹ ಸಚಿವರನ್ನು ಭೇಟಿಯಾದ ಪುಟ್ಟ ಪುಟ್ಟ ಮಕ್ಕಳು
ಆರಗ ಜ್ಞಾನೇಂದ್ರ ಅವರ ಸಿಟಿ ರೌಂಡ್‌ ಸಂದರ್ಭದಲ್ಲಿ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಗೃಹ ಸಚಿವರನ್ನು ಪುಟ್ಟ ಮಕ್ಕಳು ಭೇಟಿ ಮಾಡಿದರು.  ಈ ವೇಳೆ ಮಕ್ಕಳು ನೀವು ಗೃಹ ಸಚಿವರಾಗಲು ಸ್ಫೂರ್ತಿ ಏನು ಎಂದು  ಆರಗ ಜ್ಞಾನೇಂದ್ರ ಅವರಿಗೆ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಏನಿಲ್ಲ,  ಪಕ್ಷ ಜವಾಬ್ದಾರಿ ಕೊಟ್ಟಿದೆ. ಅದನ್ನ ನಿಭಾಯಿಸುತ್ತಿದ್ದೇನೆ ಎಂದರು. ನೀವು ಮುಂದೆ ಪೊಲೀಸ್ ಆಫೀಸರ್ ಅಗಬೇಕು ಎಂದು ಮಕ್ಕಳಿಗೆ ಆರಗ ಜ್ಞಾನೇಂದ್ರ ಅವರು ಸಲಹೆ ಕೊಟ್ಟರು.

ಸಿಟಿ ರೌಂಡ್ಸ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಬೆಂಗಳೂರು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದು, ಪೊಲೀಸರಿಗೆ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ರೌಂಡ್ಸ್ ಹಾಕಿದೆ. ಜನ ಕಫ್ಯೂ ನಿಬಂಧನೆಗಳಿಗೆ ಗೌರವ ಕೊಟ್ಟಿದ್ದಾರೆ. ಇದ್ದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದರು.

1200 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಜನರು ತಮ್ಮ ಆರೋಗ್ಯ ದ ಕಡೆ ಹೆಚ್ಚು ಗಮನ ಕೊಡಬೇಕು. ಎರಡನೇ ಅಲೆಯಲ್ಲಿ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಎರಡನೇ ಅಲೆಯಲ್ಲಿ ಆದ ತೊಂದರೆ ಈ ಸಂದರ್ಭದಲ್ಲಿ ಅಗಬಾರದ ಅನ್ನೋ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು,

ಇನ್ನು ಮೇಕೆದಾಟು ಯೋಜನೆಗಾಗಿ ನಾಳೆ(ಭಾನುವಾರ) ಕಾಂಗ್ರೆಸ್‌ನಿಂದ ಪಾದಯಾತ್ರೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು,  ಪಾದಯಾತ್ರೆ ಬೆಂಗಳೂರಿನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪಾದಯಾತ್ರೆ ಮುಂದೂಡುವಂತೆ ನಾವು ಮನವಿ ಮಾಡುತ್ತೇವೆ. ಪ್ರತಿಭಟಿಸಲು ಎಲ್ಲರಿಗೂ ಅವಕಾಶವಿದೆ, ಆದ್ರೆ ಇದು ಟೈಂ ಅಲ್ಲ ಎಂದು ಎಂದರು.

 ಪಾದಯಾತ್ರೆ ಮಾಡಿದ್ರೇ ಕೋವಿಡ್ ನಿಯಮದಂತೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇನೆ . ಕಾಂಗ್ರೆಸ್ ನವರು ಸರ್ಕಾರ ನಡೆಸಿದ್ದಾರೆ.  ಪಾದಯಾತ್ರೆ  ಈ ಸಂದರ್ಭದಲ್ಲಿ ಮಾಡಬೇಕೋ ಅಥವಾ ಬೇಡ್ವಾ ಅಂತ ಅವರು ತಿಳಿದುಕೊಳ್ಳಬೇಕು. ಜವಾಬ್ದಾರಿಯಿಂದ ವರ್ತನೆ ಮಾಡಬೇಕು ಟಾಂಗ್ ಕೊಟ್ಟರು.

click me!