ಭದ್ರಾ ಅಭಯಾರಣ್ಯದಲ್ಲಿ 11 ಕಾಡು ಪ್ರಾಣಿಗಳು ಮೃತಪಟ್ಟಿರುವುದು ಜಿಲ್ಲೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, 4 ವರ್ಷಗಳ ಹಿಂದೆಯೂ ಲಕ್ಕವಳ್ಳಿ ವಲಯದಲ್ಲಿ ಕಾಡುಪ್ರಾಣಿಗಳು ಈ ರೀತಿಯಲ್ಲಿ ಮೃತಪಟ್ಟಿದ್ದವು ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು(ಏ.18): ಅಮೆರಿಕದಲ್ಲಿ ಹುಲಿಯಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು ಈಗಾಗಲೇ ಸುದ್ದಿಯಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ಅಭಯಾರಣ್ಯದಲ್ಲಿ 11 ಕಾಡು ಪ್ರಾಣಿಗಳು ಮೃತಪಟ್ಟಿರುವುದು ಜಿಲ್ಲೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, 4 ವರ್ಷಗಳ ಹಿಂದೆಯೂ ಲಕ್ಕವಳ್ಳಿ ವಲಯದಲ್ಲಿ ಕಾಡುಪ್ರಾಣಿಗಳು ಈ ರೀತಿಯಲ್ಲಿ ಮೃತಪಟ್ಟಿದ್ದವು ಎಂದು ಹೇಳಲಾಗುತ್ತಿದೆ.
ಏ.2ರಿಂದ ಈವರೆಗೆ 10 ಕಾಡುಹಂದಿ, 1 ಕಾಡುಕೋಣ ಮೃತಪಟ್ಟಿದೆ. ಹಂದಿಗಳ ಕಳೇ ಬರಹದ ಮಾದರಿ ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಪಶು ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡಲಾಗಿದೆ. ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಭದ್ರಾ ಹುಲಿ ಯೋಜನೆಯ ನಿರ್ದೇಶಕ ಎಸ್.ಧನಂಜಯ್ ಅವರು ತಿಳಿಸಿದ್ದಾರೆ.
ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!
ಭದ್ರಾ ಹುಲಿಯ ಯೋಜನೆ ವ್ಯಾಪ್ತಿಗೆ ಬರುವ ಲಕ್ಕವಳ್ಳಿ ಹಾಗೂ ಚಿಕ್ಕಮಗಳೂರು ಉಪ ವಲಯದಲ್ಲಿ ಕಾಡುಪ್ರಾಣಿಗಳು ನೀರು ಕುಡಿಯಲು ಬರುವ 27 ಸ್ಥಳಗಳನ್ನು ಗುರುತು ಮಾಡಿ ಆ ಪ್ರದೇಶಗಳಲ್ಲಿ ಒಂದು ವಾರದ ಹಿಂದೆ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಜತೆಗೆ ಈ ಎರಡು ಸಬ್ ಡಿವಿಜನ್‌ಗಳಲ್ಲಿ ಸಹಾಯಕ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ 2 ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಇದ್ರೂ ಟ್ರಾಫಿಕ್ ಜಾಮ್, ಬಾಕಿಯಾದ ಆ್ಯಂಬುಲೆನ್ಸ್
ಕಾಡು ಪ್ರಾಣಿಗಳ ಚಲನವಲನ ಹಾಗೂ ಅವುಗಳ ವರ್ತನೆಗಳ ಮೇಲೆ ನಿಗಾ ಇಡಬೇಕೆಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಯಾವುದೇ ಪ್ರಾಣಿ ಸತ್ತು ತುಂಬಾ ದಿನಗಳು ಆಗಿದ್ದರೆ, ಸಾವಿಗೆ ಕಾರಣ ಕಂಡುಹಿಡಿಯಲು ತಡವಾಗುತ್ತದೆ. ಪ್ರಾಣಿ ಸತ್ತ ಕೆಲವೇ ದಿನಗಳಲ್ಲಿ ಗಮನಕ್ಕೆ ಬಂದರೆ, ಅದರ ಮಾದರಿಯನ್ನು ಪ್ರಾಯೋಗಾಲಯಕ್ಕೆ ಕಳಿಸಿ ಕಾರಣವನ್ನು ಕಂಡುಹಿಡಿಯಬಹುದು. ಈ ಕಾರಣಕ್ಕಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.