ಲಾಕ್‌ಡೌನ್ ಇದ್ರೂ ಟ್ರಾಫಿಕ್ ಜಾಮ್, ಬಾಕಿಯಾದ ಆ್ಯಂಬುಲೆನ್ಸ್‌

By Suvarna News  |  First Published Apr 18, 2020, 12:24 PM IST

ಆ್ಯಂಬುಲೆನ್ಸ್‌ ಬರುವಾಗ ಯಾವುದೇ ವಾಹನವಾಗಿದ್ದರೂ ಮೊದಲು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಮಾನವೀಯತೆ ಹಾಗೂ ಕಾನೂನು ಸಹ ಆಗಿದೆ. ಆದರೆ, ದಾವಣಗೆರೆಯಲ್ಲಿ ತುರ್ತಾಗಿ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸೇರಿಸಲು ಹೊರಟಿದ್ದ ಆ್ಯಂಬುಲೆನ್ಸ್‌ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ.


ದಾವಣಗೆರೆ(ಏ.18): ಲಾಕ್‌ ಡೌನ್‌, 144ನೇ ಸೆಕ್ಷನ್‌ ಜಾರಿ, ಕಫä್ರ್ಯ ಎಂಬುದು ನಗರ, ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆಯೋ? ಇಲ್ಲವೋ? ಕೊರೋನಾ ವೈರಸ್‌ ವಿರುದ್ಧ ಜಾಗೃತರಾಗದ ನಗರ- ಜಿಲ್ಲೆಯ ಜನತೆ ನಿರ್ಲಕ್ಷ್ಯದಿಂದಾಗಿ ಇಂಥದ್ದೊಂದು ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಕೊರೋನಾಮುಕ್ತ ಜಿಲ್ಲೆಯಾಗಿ ಗ್ರೀನ್‌ ಝೋನ್‌ ಪಟ್ಟಿಗೆ ಸೇರಬೇಕಾದ ದಾವಣಗೆರೆ ಜಿಲ್ಲೆಗೆ ಜನರ ನಿರ್ಲಕ್ಷ್ಯದಿಂದಾಗಿ ಮತ್ತೆ ಯಾವ ಅಪಾಯ ಕಾದಿದೆ ಎಂಬ ಆತಂಕ ಎದುರಾಗಿದೆ.

ಆ್ಯಂಬುಲೆನ್ಸ್‌ ಬರುವಾಗ ಯಾವುದೇ ವಾಹನವಾಗಿದ್ದರೂ ಮೊದಲು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಮಾನವೀಯತೆ ಹಾಗೂ ಕಾನೂನು ಸಹ ಆಗಿದೆ. ಆದರೆ, ಗುರುವಾರ ನಗರದಲ್ಲಿ ತುರ್ತಾಗಿ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸೇರಿಸಲು ಹೊರಟಿದ್ದ ಆ್ಯಂಬುಲೆನ್ಸ್‌ ಮುಂದೆ ಸಾಗಲು ಪರದಾಡುವಂತಾಯಿತು. ಇದಕ್ಕೆ ಕಾರಣವಾಗಿದ್ದು ಜನರ ಹಾಗೂ ವಾಹನಗಳ ಸಂಚಾರ.

Tap to resize

Latest Videos

ಮಂಡ್ಯದಲ್ಲಿ ಜಾಗೃತಿ ಪಥ ಸಂಚಲನ ನಡೆಸುತ್ತಿದ್ದ ಪೊಲೀಸರಿಗೆ ಸಾರ್ವಜನಿಕರಿಂದ ಹೂಮಳೆ

ಕೊರೋನಾ ವೈರಸ್‌ ವಿರುದ್ಧ ಸರ್ಕಾರದ ಆದೇಶದಂತೆ ಜಿಲ್ಲಾ ಆಡಳಿತ ಜನಜಾಗೃತಿ ಮೂಡಿಸುತ್ತ, ಕಾಲಕಾಲಕ್ಕೆ ಆದೇಶ ಪಾಲಿಸುತ್ತಿದೆ. ದ್ವಿತೀಯ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಮಂಗಳವಾರದಿಂದ ಕೆಲ ನಿಯಮಗಳ ಸಡಿಲಿಸಿದ್ದ ಪರಿಣಾಮ ಜನರೂ ಯಾವುದೇ ಭಯ, ಆತಂಕವಿಲ್ಲದೇ ಬೀದಿಗಿಳಿಯುತ್ತಿದ್ದಾರೆ. ಅಶೋಕ ಗೇಟ್‌ ಬಳಿ ನೂರಾರು ವಾಹನಗಳ ದಟ್ಟಣೆ ಮಧ್ಯೆ ರೋಗಿಯನ್ನು ಹೊತ್ತ ಆ್ಯಂಬುಲೆನ್ಸನ್ನು ಚಾಲಕ ಸಾಕಷ್ಟುಪ್ರಯಾಸದಿಂದ ಚಾಲನೆ ಮಾಡಿಕೊಂಡು ಹೋಗಬೇಕಾಯಿತು.

ಹೊಸಪೇಟೆಯಲ್ಲಿ ಹೆಚ್ಚುತ್ತಿರುವ ಕೊರೋನಾ: ಚಿತ್ರದುರ್ಗ ಜಿಲ್ಲೆಗೆ ಗಡಿ ಗಂಡಾಂತರ!

ಬಹುತೇಕ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಮತ್ತೆ ಕೆಲವು ಅಧಿಕಾರಿಗಳ ವರ್ತನೆ ಸ್ವತಃ ಇಲಾಖೆ ಸಿಬ್ಬಂದಿ ಬೇಸರಕ್ಕೂ ಕಾರಣವಾಗುತ್ತಿದೆ. ಕೊರೋಣಾ ವೈರಸ್‌ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಜನರು, ಅಧಿಕಾರಿಗಳು ಸಾಮಾನ್ಯಪ್ರಜ್ಞೆ ಕಳೆದುಕೊಂಡು ವರ್ತಿಸಬಾರದು.

click me!