ಹುಬ್ಬಳ್ಳಿಯ ವಿಕಾಸ ನಗರದ ನಿವಾಸಿಗಳಾದ ಸುಲೋಚನಾ ಪೈ ಮತ್ತು ಶಾರದಾ ಪೈ ಅನ್ನುವವರು ಹುಬ್ಬಳ್ಳಿಯ ಕ್ವಾಯನ್ ರಸ್ತೆಯಲ್ಲಿರುವ ಸರಸ್ವತಿ ಕೋ ಆಪರೇಟಿವ್ ಕ್ರೇಡಿಟ್ ಸೊಸೈಟಿಯ ಸದಸ್ಯರಾಗಿ ಖಾಯಂ ಠೇವಣಿ ಇಟ್ಟು ಉಳಿತಾಯ ಖಾತೆ ಹೊಂದಿದ್ದರು.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಸೆ.2): ಹುಬ್ಬಳ್ಳಿಯ ವಿಕಾಸ ನಗರದ ನಿವಾಸಿಗಳಾದ ಸುಲೋಚನಾ ಪೈ ಮತ್ತು ಶಾರದಾ ಪೈ ಅನ್ನುವವರು ಹುಬ್ಬಳ್ಳಿಯ ಕ್ವಾಯನ್ ರಸ್ತೆಯಲ್ಲಿರುವ ಸರಸ್ವತಿ ಕೋ ಆಪರೇಟಿವ್ ಕ್ರೇಡಿಟ್ ಸೊಸೈಟಿಯ ಸದಸ್ಯರಾಗಿ ಖಾಯಂ ಠೇವಣಿ ಇಟ್ಟು ಉಳಿತಾಯ ಖಾತೆ ಹೊಂದಿದ್ದರು.
ಅವರಿಬ್ಬರೂ ಸದರಿ ಸೊಸೈಟಿಯಲ್ಲಿ ಒಟ್ಟು ರೂ.10,50,756 ಮೊತ್ತದ ವಿವಿಧ ಠೇವಣಿ ಒಂದು ವರ್ಷದ ಅವಧಿಗೆ ಇಟ್ಟಿದ್ದರು ಜೊತೆಗೆ ಅವರ ಉಳಿತಾಯ ಖಾತೆಯಲ್ಲಿ ರೂ.1,35,320 ಹಣ ಇತ್ತು ಠೇವಣಿ ಅವಧಿ ಮುಗಿದಿದ್ದರಿಂದ ಠೇವಣಿ ಹಣ ಮತ್ತು ತಮ್ಮ ಉಳಿತಾಯ ಖಾತೆಯಲ್ಲಿರುವ ಹಣ ಕೊಡುವಂತೆ ದೂರುದಾರರು ಹಲವು ಬಾರಿ ವಿನಂತಿಸಿದರೂ ಸದರಿ ಸೊಸೈಟಿಯವರು ಅವರ ಹಣ ಅಥವಾ ಬಡ್ಡಿಯನ್ನು ಅವರಿಗೆ ಕೊಟ್ಟಿರಲಿಲ್ಲ ಅಂತಹ ಎದುರುದಾರರ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಎದುರುದಾರ ಸೊಸೈಟಿಯವರು ಗ್ರಾಹಕರ ರಕ್ಷಣಾ ಕಾಯ್ದೆಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಬ್ಬರೂ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಿರ್ಯಾದಿ ಸಲ್ಲಿಸಿದ್ದರು.
ಸೇವಾ ನ್ಯೂನತೆ: ಜಿಯೋ ಕಂಪನಿಗೆ ಸಿಮ್ ಸಕ್ರಿಯಗೊಳಿಸಲು ಗ್ರಾಹಕ ಆಯೋಗ ನಿರ್ದೇಶನ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ ಬೋಳಶೆಟ್ಟಿ ಮತ್ತು ಪ್ರಭು.ಸಿ. ಹಿರೇಮಠ ಅವರು ಠೇವಣಿ ಅವಧಿ ಮುಗಿದರೂ ದೂರುದಾರರ ಹಣ ಹಿಂದಿರುಗಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರಿಗೆ ಅವರ ಠೇವಣಿ ಹಣ ರೂ.10,50,756 ಮತ್ತು ಉಳಿತಾಯ ಖಾತೆಯಲ್ಲಿರುವ ಹಣ ರೂ.1,35,320 ಹಣವನ್ನು ಅದರ ಮೇಲೆ ಶೇ.9 ರಂತೆ ಠೇವಣಿ ಇಟ್ಟ ದಿನಾಂಕದಿಂದ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ನಿರ್ದೇಶನ ನೀಡಿದೆ ಜೊತೆಗೆ ದೂರುದಾರರು ಅನುಭವಿಸಿದ ಮಾನಸಿಕ ಹಿಂಸೆಗೆ ರೂ.50 ಸಾವಿರ ಪರಿಹಾರ ಮತ್ತು ಪ್ರಕರಣ ಖರ್ಚು ಅಂತಾ ರೂ.10 ಸಾವಿರ ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಎದುರುದಾರರಿಗೆ ಕೊಡುವಂತೆ ಆಯೋಗ ಆದೇಶಿಸಿದೆ.
ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ Star Air Airlinesಗೆ ರೂ.8 ಲಕ್ಷ 10 ಸಾವಿರ ರೂ ದಂಡ