ಕೊಬರಿ ಖರೀದಿ ಕೇಂದ್ರದಲ್ಲಿ (ನ್ಯಾಫೆಡ್) ಗ್ರೇಡ್‌ನ ಹೆಸರಿನಲ್ಲಿ ರೈತರು ಬೆಳೆದ ಕೊಬರಿಯನ್ನು ಖರೀದಿ ಮಾಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆಂದು ಆರೋಪಿಸಿ ರೈತಾಪಿಗಳು ತಾಲೂಕು ಕಛೇರಿಯ ಒಳಗೆ ಕೊಬರಿ ಸುರಿದು ಪ್ರತಿಭಟನೆ ಮಾಡಿದರು.
ತುರುವೇಕೆರೆ : ಕೊಬರಿ ಖರೀದಿ ಕೇಂದ್ರದಲ್ಲಿ (ನ್ಯಾಫೆಡ್) ಗ್ರೇಡ್‌ನ ಹೆಸರಿನಲ್ಲಿ ರೈತರು ಬೆಳೆದ ಕೊಬರಿಯನ್ನು ಖರೀದಿ ಮಾಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆಂದು ಆರೋಪಿಸಿ ರೈತಾಪಿಗಳು ತಾಲೂಕು ಕಛೇರಿಯ ಒಳಗೆ ಕೊಬರಿ ಸುರಿದು ಪ್ರತಿಭಟನೆ ಮಾಡಿದರು.
ನ್ಯಾಫೆಡ್ ಕೇಂದ್ರದಲ್ಲಿ 75 ಮಿ.ಮೀ.ನಷ್ಟುಗಾತ್ರದ ಕೊಬರಿಗಳನ್ನು ಮಾತ್ರ ಖರೀದಿ ಮಾಡಬೇಕೆಂದು ನ್ಯಾಫೆಡ್ ಕೇಂದ್ರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ 75 ಮಿ.ಮೀ. ಗಿಂತಲೂ ಕಡಿಮೆ ಇರುವ ಕೊಬರಿಗಳನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ರೈತಾಪಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ರೈತಾಪಿಗಳು ಆರೋಪಿಸಿದ್ದಾರೆ.
ಹಲವಾರು ವಿವಿಧ ಕಾರಣಕ್ಕೆ ಕೊಬರಿ ಬೆಳೆ ಸಣ್ಣ ಮತ್ತು ದಪ್ಪ ಇಳುವರಿ ಬರುತ್ತವೆ. 75 ಮಿ.ಮೀ.ಗಿಂತಲೂ ಕಡಿಮೆ ಗಾತ್ರದ ಕೊಬರಿಗಳೂ ಸಹ ಬಹಳ ಗುಣಮಟ್ಟವನ್ನು ಹೊಂದಿ ರುತ್ತವೆ. ಆದರೆ ನ್ಯಾಫೆಡ್ ಅಧಿಕಾರಿಗಳು ಕೇವಲ ಗಾತ್ರಕ್ಕೆ ಪ್ರಾಧಾನ್ಯತೆ ನೀಡಿ ಕಡಿಮೆ ಗಾತ್ರದ ಕೊಬರಿಗಳನ್ನು ಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ವರ್ಷಗಳ ಕಾಲ ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತರು ದೂರಿದರು.
ಪ್ರತಿ ಕ್ವಿಂಟಲ್ ಕೊಬರಿ ಬೆಳೆಯಲು ಕನಿಷ್ಠ 15 ಸಾವಿರ ರು.ಗಳು ಬೇಕು. ವರ್ಷಗಟ್ಟಲೆ ಬೆಳೆದು ಇಂದು ಮಾರುಕಟ್ಟೆಇಲ್ಲದೇ ರೈತಾಪಿಗಳು ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಕೊಬರಿಗೆ ಕೇವಲ 8 ಸಾವಿರ ರೂ ಇದೆ. ಇತ್ತ ನ್ಯಾಫೆಡ್‌ಗೆ ಬಿಟ್ಟರೆ ಸುಮಾರು 11.750 ರೂಗಳು ದೊರೆಯುತ್ತವೆ. ಆದರೆ ಅಧಿಕಾರಿಗಳು ಗ್ರೇಡ್ ಹೆಸರಿನಲ್ಲಿ ರೈತ ರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಹೊಸಹಳ್ಳಿ ದೇವರಾಜ್ ಮತ್ತು ಕಸುವಿನಹಳ್ಳಿಯ ಆನಂದ್ ದೂರಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಿಂದ ಕೊಬರಿ ಖರೀದಿ ಮಾಡಲು 4 ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ಕೇವಲ ಐದಾರು ಟ್ರ್ಯಾಕ್ಟರ್‌ನಷ್ಟುಕೊಬರಿಯನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ. ಆದರೆ ಪ್ರತಿದಿನ ಇಲ್ಲಿಗೆ ನೂರು ವಾಹನಗಳಲ್ಲಿ ಕೊಬರಿಯನ್ನು ತರಲಾಗುತ್ತಿದೆ. ಹಾಗಾಗಿ ಎಪಿಎಂಸಿ ಆವರಣದಲ್ಲಿ ಐನೂರಕ್ಕೂ ಹೆಚ್ಚು ವಾಹನ ಗಳು ಕಳೆದ 15 ದಿನಗಳಿಂದ ಸಾಲುಗಟ್ಟಿನಿಂತಿವೆ. ಪ್ರತಿದಿನ ಟ್ರ್ಯಾಕ್ಟರ್‌ಗೆ ಬಾಡಿಗೆ ಕೊಡಲು ರೈತಾಪಿಗಳಿಗೆ ಆಗುತ್ತಿಲ್ಲ. ಒಡೆದಿರುವ ಕೊಬರಿ ಮಳೆ, ಬಿಸಿಲಿಗೆ ತೂಕವೂ ಕಡಿಮೆಯಾ ಗುತ್ತದೆ. ಹೀಗಾದರೆ ರೈತಾಪಿಗಳ ನೋವು ಕೇಳುವವರಾರಯರು ಎಂದು ನೀಲಕಂಠಸ್ವಾಮಿ ಮತ್ತು ಸೊಪ್ಪಿನಹಳ್ಳಿ ಕಲ್ಲೇಶ್ ಕಳವಳ ವ್ಯಕ್ತಪಡಿಸಿದರು.
ರೈತರು ತಾಕೀತು: ಕೊಬರಿ ಕೇಂದ್ರದ ಬಳಿ ತಹಸೀಲ್ದಾರ್‌ರವರು ಬಂದು ರೈತಾಪಿಗಳ ಸಮಸ್ಯೆ ಆಲಿಸಬೇಕೆಂದು ರೈತರು ತಾಕೀತು ಮಾಡಿದರು. ಆದರೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ರವರು ತಾವು ಬೇರೆಡೆ ಇರುವುದರಿಂದ ಸ್ಥಳಕ್ಕೆ ಬರಲು ಸಾಧ್ಯವಿಲ್ಲವೆಂದು ಹೇಳಿ, ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿಕೊಡುವುದಾಗಿ ಹೇಳಿದರು. ಆದರೆ ರೈತರು ಮಾತ್ರ ತಹಸೀಲ್ದಾರ್ ರವರು ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದರು. ಆದರೆ ಖರೀದಿ ಕೇಂದ್ರದಲ್ಲಿ ಕೊಳ್ಳುವ ಸಮಯ ಮೀರಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಬರಲಿಲ್ಲ. ಆದರೆ ಎಪಿಎಂಸಿಯ ಕಾರ್ಯ ದರ್ಶಿ ವೆಂಕಟೇಶ್ ಆಗಮಿಸಿ ರೈತರಿಗೆ ಕೊಬರಿ ಗುಣಮಟ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಜೂನ್ 27ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಗುಣಮಟ್ಟದ ಎಲ್ಲಾ ಕೊಬರಿಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳೊಂದಿಗೆ ಚರ್ಚಿಸುವೆ.
- ಎಂ.ಟಿ.ಕೃಷ್ಣಪ್ಪ, ಶಾಸಕ