ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಾಲಯ ಒಂದರಲ್ಲಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಕಾರವಾರ (ಆ.16): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಾಲದಲ್ಲಿ ಕಳ್ಳತನ ನಡೆದಿದ್ದು,ಅಪಾರ ಪ್ರಮಾಣದ ಚಿನ್ನಾಭರಣ ಕಳವಾಗಿದೆ.
ಕುಮಟಾ ತಾಲೂಕಿನ ವಿಷ್ಣುಮೂರ್ತಿ ದೇಗುಲದಲ್ಲಿ ಕಳ್ಳತನ ನಡೆದಿದ್ದು, ದೇವಾಲಯದ ಬಾಗಿಲು ಮುರಿದು ಕಳವು ಮಾಡಲಾಗಿದೆ.
ದೇವರ ಕವಚ ಸೇರಿ ಸುಮಾರು 10 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ರಾಜ್ಯದಲ್ಲಿ ಮತ್ತೆ 5 ದಿನ ಭಾರೀಮಳೆ : ಎಲ್ಲೆಲ್ಲಿ ಅಲರ್ಟ್..?...
ಕಳ್ಳತನದ ಬಗ್ಗೆ ಅನುಮಾನಗೊಂಡು ಅರ್ಚಕರು ಸ್ಥಳಕ್ಕೆ ಆಗಮಿಸುವ ವೇಳೆಗಾಗಲೇ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದು, ಸ್ಥಳಕ್ಕೆ ಕುಮಟಾಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚುತಜ್ಞರು ಭೇಟಿ ನೀಡಿದ್ದು,ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.