ದೋಣಿಗಳಿಗೆ ಮುಚ್ಚಲಾಗಿದ್ದ ತೆಂಗಿನ ಗರಿಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಗ್ನಿಯ ಜ್ವಾಲೆ ಹರಡಿ ಸ್ಥಳದಲ್ಲಿ ಲಂಗರು ಹಾಕಿದ್ದ 10 ಮೀನುಗಾರಿಕಾ ದೋಣಿ ಹಾಗೂ ಬೈಕ್ ಆಹುತಿ ತೆಗೆದುಕೊಂಡಿತು. ಈ ದುರ್ಘಟನೆಯಿಂದ ಅಂದಾಜು 15 ಕೋಟಿ ರು.ಗೂ ಅಧಿಕ ನಷ್ಟವಾಗಿದೆ.
ಕುಂದಾಪುರ(ನ.14): ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಸಮೀಪದ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ದೋಣಿ ನಿಲುಗಡೆಯ ಸ್ಥಳದಲ್ಲಿ ಸೋಮವಾರ ಬೆಳಗ್ಗೆ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ ಅವಘಡದಲ್ಲಿ 10 ಮೀನುಗಾರಿಕಾ ದೋಣಿಗಳು ಹಾಗೂ ಬೈಕ್ ಅಗ್ನಿಗೆ ಆಹುತಿಯಾಗಿವೆ.
ದೋಣಿಗಳಿಗೆ ಮುಚ್ಚಲಾಗಿದ್ದ ತೆಂಗಿನ ಗರಿಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಗ್ನಿಯ ಜ್ವಾಲೆ ಹರಡಿ ಸ್ಥಳದಲ್ಲಿ ಲಂಗರು ಹಾಕಿದ್ದ 10 ಮೀನುಗಾರಿಕಾ ದೋಣಿ ಹಾಗೂ ಬೈಕ್ ಆಹುತಿ ತೆಗೆದುಕೊಂಡಿತು. ಈ ದುರ್ಘಟನೆಯಿಂದ ಅಂದಾಜು 15 ಕೋಟಿ ರು.ಗೂ ಅಧಿಕ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಪ್ಪಗಿದ್ದೇನೆಂದು ಮನನೊಂದು ಮಂಗಳೂರು ಎಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮಧ್ಯಾಹ್ನ 12 ಗಂಟೆಯ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಮೀನುಗಾರಿಕೆಯ ಋತುವಾಗಿರುವುದರಿಂದ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನೂರಾರು ಮೀನುಗಾರಿಕಾ ದೋಣಿಗಳು ಇದ್ದವು. ಆದರೆ, ಅಗ್ನಿಶಾಮಕ ಅಧಿಕಾರಿಗಳ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆ ಹಿನ್ನೆಲೆಯಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಮಾತನಾಡಿ, ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.