ಕೊರೋನಾ ಕಾಟ: ಮಾಸ್ಕ್‌ ಧರಿಸದ KSRTC ಸಿಬ್ಬಂದಿಗೆ 1 ಸಾವಿರ ದಂಡ

By Kannadaprabha NewsFirst Published Oct 4, 2020, 9:16 AM IST
Highlights

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಬಿಬಿಎಂಪಿ ಮಾರ್ಷಲ್‌| ಸಾರ್ವಜನಿಕ ಸೇವೆಯಲ್ಲಿರುವ ನೀವೇ ಮಾಸ್ಕ್‌ ಧರಿಸದಿದ್ದರೆ ಹೇಗೆ. ನಿಮಗೆ ಮನೆಯಲ್ಲಿ ಹೆಂಡತಿ ಮಕ್ಕಳು ಇಲ್ಲವೆ? ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದೀರಲ್ಲಾ ಬುದ್ಧಿ ಇಲ್ವಾ ಎಂದು ತರಾಟೆ ತೆಗೆದುಕೊಂಡ ಮಾರ್ಷಲ್|  

ಬೆಂಗಳೂರು(ಅ.04): ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಬಿಬಿಎಂಪಿ ಮಾರ್ಷಲ್‌ ಒಂದು ಸಾವಿರ ರುಪಾಯಿ ದಂಡ ವಿಧಿಸಿರುವ ಘಟನೆ ಶನಿವಾರ ಜರುಗಿದೆ.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಬಿಬಿಎಂಪಿ ಮಾರ್ಷಲ್‌, ಸಾರ್ವಜನಿಕ ಸೇವೆಯಲ್ಲಿರುವ ನೀವೇ ಮಾಸ್ಕ್‌ ಧರಿಸದಿದ್ದರೆ ಹೇಗೆ. ನಿಮಗೆ ಮನೆಯಲ್ಲಿ ಹೆಂಡತಿ ಮಕ್ಕಳು ಇಲ್ಲವೆ? ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದೀರಲ್ಲಾ ಬುದ್ಧಿ ಇಲ್ವಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಊಟಕ್ಕೆ ಹೋಗಿದ್ದೆ ಎಂದು ಹೇಳುತ್ತಾ ಕರ್ಚಿಫ್‌ ತೆಗೆದು ಬಾಯಿಗೆ ಕಟ್ಟಿಕೊಂಡರು.

ಕೊರೋನಾ ಪಾಸಿಟಿವ್‌-ನೆಗೆಟಿವ್‌ ಸಂದೇಶ ರವಾನೆ: ಬಿಬಿಎಂಪಿಗೆ ಸಾರ್ವಜನಿಕರಿಂದ ಹಿಡಿಶಾಪ

ಅಷ್ಟಕ್ಕೆ ಸುಮ್ಮನಾಗದ ಮಾರ್ಷಲ್‌, ಬಸ್‌ಗೆ ಬರೋ ಜನರಿಗೆ ನೀವು ಬುದ್ಧಿ ಹೇಳಬೇಕು. ನೀವೇ ಹೀಗೆ ನಿಯಮ ಉಲ್ಲಂಘಿಸದರೆ ಹೇಗೆ ಎಂದು ಒಂದು ಸಾವಿರ ರು. ದಂಡ ವಸೂಲಿ ಮಾಡಿದರು. ಹಾಗೆಯೆ ಮಾಸ್ಕ್‌ ಧರಿಸದೆ ಅಡ್ಡಾದಿಡ್ಡಿ ಓಡಾಡುತ್ತಿದ್ದ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ. 
 

click me!