ನಿಲ್ಲದ ವೈರಸ್‌ ಅಟ್ಟಹಾಸ: ಬೆಂಗಳೂರಲ್ಲಿ 30 ದಿನದಲ್ಲಿ 1 ಲಕ್ಷ ಮಂದಿಗೆ ಕೊರೋನಾ...!

By Kannadaprabha NewsFirst Published Oct 1, 2020, 10:11 AM IST
Highlights

ಕಳೆದ ತಿಂಗಳಲ್ಲಿ 92 ಸಾವಿರ ಮಂದಿ ಗುಣಮುಖ, 971 ಮಂದಿ ಬಲಿ| ಆಗಸ್ಟ್‌ ಅಂತ್ಯದಿಂದ ಸೆಪ್ಟಂಬರ್‌ ಅಂತ್ಯಕ್ಕೆ ನಗರದಲ್ಲಿ 10 ಸಾವಿರ ಸಕ್ರಿಯ ಸೋಂಕು ಪ್ರಮಾಣ ಹೆಚ್ಚಳ| ಆ.31ಕ್ಕೆ ನಗರದಲ್ಲಿ 37,116 ಸಕ್ರಿಯ ಪ್ರಕರಣ ಇದ್ದವು. ಆದರೆ, ಸೆ.30ಕ್ಕೆ ಆ ಸಂಖ್ಯೆ 47,145ಕ್ಕೆ ಹೆಚ್ಚಾಗಿದೆ| 

ಬೆಂಗಳೂರು(ಅ.01): ಸೆ.1ರಿಂದ 30ರ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 1,05,327 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 92,538 ಮಂದಿ ಗುಣಮುಖರಾಗಿದ್ದು, 971 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್‌ ಅಂತ್ಯದಿಂದ ಸೆಪ್ಟಂಬರ್‌ ಅಂತ್ಯಕ್ಕೆ ನಗರದಲ್ಲಿ 10 ಸಾವಿರ ಸಕ್ರಿಯ ಸೋಂಕು ಪ್ರಮಾಣ ಹೆಚ್ಚಾಗಿವೆ. ಆ.31ಕ್ಕೆ ನಗರದಲ್ಲಿ 37,116 ಸಕ್ರಿಯ ಪ್ರಕರಣ ಇದ್ದವು. ಆದರೆ, ಸೆ.30ಕ್ಕೆ ಆ ಸಂಖ್ಯೆ 47,145ಕ್ಕೆ ಹೆಚ್ಚಾಗಿದೆ.

ಬುಧವಾರ 4,226 ಹೊಸ ಕೇಸ್‌ ಪತ್ತೆ:

ಇನ್ನು ನಗರದಲ್ಲಿ ಬುಧವಾರ 4,226 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 2,32,663ಕ್ಕೆ ಏರಿಕೆಯಾಗಿದೆ. 3667 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 1,82,581ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಒಟ್ಟು 47,145 ಸಕ್ರಿಯ ಪ್ರಕರಣಗಳಿದ್ದು, 273 ಮಂದಿ ಸೋಂಕಿತರಿಗೆ ನಗರದ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: 6 ಲಕ್ಷ ಗಡಿದಾಟಿದ ಸೋಂತರ ಸಂಖ್ಯೆ

ಬುಧವಾರ ನಗರದಲ್ಲಿ ಕೊರೋನಾ ಸೋಂಕಿಗೆ 24 ಮಂದಿ ಮೃತಪಟ್ಟ ವರದಿಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 2,936ಕ್ಕೆ ಏರಿಕೆಯಾಗಿದೆ.
 

click me!