ಬೆಂಗಳೂರಲ್ಲಿ ಮಾಸ್ಕ್ ಧರಿಸದವರಿಂದ 1.5 ಕೋಟಿ ದಂಡ ವಸೂಲಿ

By Kannadaprabha News  |  First Published Jul 28, 2020, 8:17 AM IST

ಬೆಂಗಳೂರಲ್ಲಿ ನಗರದಲ್ಲಿ ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುವವರಿಂದ ಬಿಬಿಎಂಪಿಯ ಮಾರ್ಷಲ್‌ಗಳು ಬರೋಬ್ಬರಿ 1.5 ಕೋಟಿ ರು. ದಂಡ ವಸೂಲಿ ಮಾಡಿದ್ದಾರೆ.


ಬೆಂಗಳೂರು(ಜು.28): ನಗರದಲ್ಲಿ ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುವವರಿಂದ ಬಿಬಿಎಂಪಿಯ ಮಾರ್ಷಲ್‌ಗಳು ಬರೋಬ್ಬರಿ 1.5 ಕೋಟಿ ರು. ದಂಡ ವಸೂಲಿ ಮಾಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಬಿಬಿಎಂಪಿ ಮಾರ್ಷಲ್‌ಗಳು ತಲಾ 200 ರು. ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ಈವರೆಗೆ ಮಾಸ್ಕ್‌ ಧರಿಸದ 65,958 ಮಂದಿಯಿಂದ ತಲಾ 200 ರು. ನಂತರ ಒಟ್ಟು 1,31,86,404 ರು. ದಂಡ ವಸೂಲಿ ಮಾಡಲಾಗಿದೆ.

Tap to resize

Latest Videos

undefined

ಬೆಂಗ್ಳೂರಲ್ಲಿ 6 ದಿನದಲ್ಲಿ 50 ಮಂದಿ ಪ್ಲಾಸ್ಮಾ ದಾನ

ಇನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳದ 9,157 ಮಂದಿಯಿಂದ 18,33,049 ರು. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೋಂ ಐಸೋಲೇಷನ್‌: ನಿರ್ಧಾರ ಪಾಲಿಕೆಗೆ ಸೇರಿದ್ದು   

ಕೊರೋನಾ ಸೋಂಕಿತ ವ್ಯಕ್ತಿ ಹೋಂ ಐಸೋಲೇಷನ್‌ನಲ್ಲಿ ಇರಬೇಕಾ ಅಥವಾ ಆಸ್ಪತ್ರೆ, ಆರೈಕೆ ಕೇಂದ್ರಕ್ಕೆ ದಾಖಲಾಗಬೇಕಾ ಎಂಬುದರ ಬಗ್ಗೆ ಬಿಬಿಎಂಪಿ ತೀರ್ಮಾನಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇರುವ ಬಗ್ಗೆ ಅವರ ತೀರ್ಮಾನಕ್ಕೆ ಬಿಡುವುದಿಲ್ಲ. ಬಿಬಿಎಂಪಿ ನಿಯೋಜನೆ ಮಾಡಿದ ತಂಡ ಸೋಂಕಿತರ ಮನೆಗೆ ಹೋಗಿ ವಾಸ್ತವ ಸ್ಥಿತಿ ಅರಿತುಕೊಂಡು ಈ ಬಗ್ಗೆ ತೀರ್ಮಾನಿಸಲಿದೆ ಎಂದರು.

click me!