ಪಿಂಕ್‌ ಶೌಚಾಲಯ ಗದುಗಿನ ಮಾದರಿ-ಶಾಸಕ ಎಚ್‌.ಕೆ. ಪಾಟೀಲ

By Kannadaprabha News  |  First Published Mar 19, 2023, 12:32 PM IST

ವಿದ್ಯಾರ್ಥಿನಿಯರಿಗಾಗಿ ಇರುವ ಪಿಂಕ್‌ ಶೌಚಾಲಯ ಗದುಗಿನ ಮಾದರಿಯಂದೇ ಕರೆಯಲಾಗುತ್ತಿದ್ದು. ರಾಜ್ಯದ ತುಂಬಾ ಹರಡಿದೆ ಎಂದು ಶಾಸಕ ಎಚ್‌.ಕೆ.ಪಾಟೀಲರು ಹೇಳಿದರು.


ಗದಗ (ಮಾ.19) : ವಿದ್ಯಾರ್ಥಿನಿಯರಿಗಾಗಿ ಇರುವ ಪಿಂಕ್‌ ಶೌಚಾಲಯ ಗದುಗಿನ ಮಾದರಿಯಂದೇ ಕರೆಯಲಾಗುತ್ತಿದ್ದು. ರಾಜ್ಯದ ತುಂಬಾ ಹರಡಿದೆ ಎಂದು ಶಾಸಕ ಎಚ್‌.ಕೆ.ಪಾಟೀಲ(HK Patil)ರು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಶಾಸಕ ಬಸವರಾಜ ಹೊರಟ್ಟಿ(Basavaraj Horatti)ಅವರ ಅನುದಾನದಲ್ಲಿ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಾಣಗೊಂಡ ರಂಗಮಂದಿರ ಉದ್ಘಾಟನೆ, ಹೇಮಲತಾ ಬಸವರಾಜ ಹೊರಟ್ಟಿಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಚಾಲನೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಪಿಂಕ್‌ ಶೌಚಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Latest Videos

undefined

 

ಗದಗನಲ್ಲಿ ಎಚ್‌.ಕೆ.ಪಾಟೀಲರ ಪಾರಮ್ಯ ಮುರಿಯುವುದು ಬಿಜೆಪಿಗೆ ಸವಾಲು..!

ಮಹಿಳೆಯರಿಗಾಗಿ ಮತದಾನಕ್ಕೆ ಪಿಂಕ್‌ ಬಣ್ಣ ಬಳಸಲಾಗಿತ್ತು. ಇದನ್ನು ಗಮನಸಿದ್ದ ಸಿದ್ದು ಪಾಟೀಲರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಪಿಂಕ್‌ ಕಲರ್‌ನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಿಸಿದರು. ಅದು ಎಲ್ಲಡೆ ಗಮನ ಸೆಳೆಯಿತು. ಅದಕ್ಕೆ ರಾಷ್ಟ್ರಮಟ್ಟಪುರಸ್ಕಾರವು ಸಹ ಬಂದಿತು. ಹೀಗೆ ಗದಗ ಕ್ರಾಂತಿಕಾರಕ ಯೋಜನೆಗಳಿಗೆ ಮಾದರಿ ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿಮಾತನಾಡಿ, ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದಕ್ಕೆ ಆದ್ಯತೆ ನೀಡುತ್ತಿರುವೆ. ನನ್ನ ಅನುದಾನದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ನನಗೆ ಬಹಳ ಸಂತೋಷವಾಗಿದೆ. ಇದಕ್ಕೆ ಶ್ರಮಿಸಿದ ಅವ್ವ ಟ್ರಸ್ಟಿನ ಪದಾಧಿಕಾರಿಗಳನ್ನು ಅಭಿನಂದಿಸಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

Lokayukta Raid: ವಾರಕ್ಕೊಮ್ಮೆ ಬರುವ ಮೋದಿ ಇದನ್ನೇ ಕಲಿಸಿ ಹೋಗಿದ್ದೀರಾ: ಶಾಸಕ ಎಚ್ ಕೆ ಪಾಟೀಲ ಪ್ರಶ್ನೆ

ನಿಜಗುಣಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅವ್ವ ಟ್ರಸ್ಟಿನ ಡಾ. ಬಸವರಾಜ ಧಾರವಾಡ ಮಾತನಾಡಿ ಹಲವಾರು ವಿಷಯ ತಿಳಿಸಿದರು. ನಗರಸಭೆ ಅಧ್ಯಕ್ಷ ಉಷಾ ದಾಸರ, ಸದಸ್ಯೆ ವಿದ್ಯಾವತಿ ಗಡಗಿ, ಕೃಷ್ಣಾ ಪರಾಪೂರ, ರೇಣುಕಾ, ಡಿಡಿಪಿಐ ಬಸಲಿಂಗಪ್ಪ, ಬಿಇಓ ಜಯಶ್ರೀ ವರೂರ ಆಗಮಿಸಿದ್ದರು. ಮುಖ್ಯೋಪಾಧ್ಯಾಯ ಮುಳಗುಂದಮಠ ಸ್ವಾಗತಿಸಿದರು. ಜಿ.ಬಿ. ಅಣ್ಣಿಗೇರಿ ವಂದಿಸಿದರು.

click me!