ಮುಸ್ಲಿಮರು ಸಿಎಂಗೆ ಓಟಿನ ಜೊತೆ ಒಂದನಿ ರಕ್ತ ಕೊಡಿ

Published : Apr 28, 2018, 04:41 PM ISTUpdated : Apr 28, 2018, 04:50 PM IST
ಮುಸ್ಲಿಮರು ಸಿಎಂಗೆ ಓಟಿನ ಜೊತೆ ಒಂದನಿ ರಕ್ತ ಕೊಡಿ

ಸಾರಾಂಶ

ಖರೀದಿ ಮಾಡಲು ಮುಸಲ್ಮಾನರು ಬಿಟ್ಡಿ ಬಿದ್ದಿಲ್ಲ. ಕುಮಾರಸ್ವಾಮಿ ಅವರು ಮಾಡುವುದನ್ನ ನನ್ನ ಮೇಲೆ ಹೇಳುತ್ತಿದ್ದಾರೆ. ಹಿಂದೆ ಜೆಡಿಎಸ್ ನಲ್ಲಿ ನಾನು ಹಲವರನ್ನು ಗೆಲ್ಲಿಸಿದ್ದಕ್ಕೆ ಏನನ್ನುತ್ತಾರೆ. ಅವರು ಮುಸಲ್ಮಾನರನ್ನು 'ಸಾಬರು' ಅಂತಲೂ ಕರೆದಿಲ್ಲ, ತುರ್ಕರು ಎಂದು ಹೇಳಿ ಅವಮಾನ ಮಾಡಿದ್ದಾರೆ. ನಮ್ಮನ್ನು ಸೋಲಿಸೋದು ಹಾಗಿರಲಿ, ಅವರ ಸೋಲನ್ನು ತಪ್ಪಿಸಿಕೊಳ್ಳೋಕೆ ಹೇಳಿ

ಮೈಸೂರು(ಏ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಹೆಚ್ಚಿನ ಸವಾಲಿಲ್ಲದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ನೇರ ಹವಾಹಣಿಯಿದೆ. 
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಚಾಮರಾಜಪೇಟೆ ಮಾಜಿ ಶಾಸಕ ಜಮೀರ್ ಅಹಮದ್ ಖಾನ್ ’ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಸ್ಲಿಮರಿಗೆ ಋಣ ಇದೆ. ಮುಸ್ಲಿಮರು ಬರೀ ಓಟು ಕೊಟ್ಟರೆ ಸಾಲದು, ರಕ್ತವೂ ಕೊಡಬೇಕು ಎಂದು ಹೇಳಿದ ಅವರು  ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಹಾಗೂ ನಮ್ಮನ್ನ ಸೋಲಿಸೋದು ಇರಲಿ, ತಾವು ಮೊದಲು ಗೆದ್ದರೆ ಸಾಕು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಬುಡವೇ ಅಳ್ಳಾಡುತ್ತಿದೆ. ಅಲ್ಲಿಯ ಮುಖಂಡರು ತಾವಾಗೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
ಖರೀದಿ ಮಾಡಲು ಮುಸಲ್ಮಾನರು ಬಿಟ್ಡಿ ಬಿದ್ದಿಲ್ಲ. ಕುಮಾರಸ್ವಾಮಿ ಅವರು ಮಾಡುವುದನ್ನ ನನ್ನ ಮೇಲೆ ಹೇಳುತ್ತಿದ್ದಾರೆ. ಹಿಂದೆ ಜೆಡಿಎಸ್ ನಲ್ಲಿ ನಾನು ಹಲವರನ್ನು ಗೆಲ್ಲಿಸಿದ್ದಕ್ಕೆ ಏನನ್ನುತ್ತಾರೆ. ಅವರು ಮುಸಲ್ಮಾನರನ್ನು 'ಸಾಬರು' ಅಂತಲೂ ಕರೆದಿಲ್ಲ, ತುರ್ಕರು ಎಂದು ಹೇಳಿ ಅವಮಾನ ಮಾಡಿದ್ದಾರೆ. ನಮ್ಮನ್ನು ಸೋಲಿಸೋದು ಹಾಗಿರಲಿ, ಅವರ ಸೋಲನ್ನು ತಪ್ಪಿಸಿಕೊಳ್ಳೋಕೆ ಹೇಳಿ. ಕುಮಾರಸ್ವಾಮಿ ನಮ್ಮೆಲ್ಲರನ್ನು ಸೋಲಿಸೋಕೆ ಅವರು ದೇವರಲ್ಲ. ನಕಲಿಶಾಮ ಕುಮಾರಸ್ವಾಮಿಯೋ ಅಥವಾ ನಾನೋ ಜನ ತೀರ್ಮಾನ ಮಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ