ಸಿಎಂ ಸೋಲಿಸಲು ರೈತ ಸಂಘದ ನಿರ್ಣಯ

First Published Apr 28, 2018, 4:11 PM IST
Highlights

ಪಟ್ಟಣದ ಗಸ್ ಹೌಸ್ ಬಳಿಯ ಕುವೆಂಪು ಪಾರ್ಕ್’ನಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಜಿ.ಟಿ.ದೇವೇಗೌಡ ಸಭೆಗೆ ಆಗಮಿಸಿ ಬೆಂಬಲ ಕೋರಿದಾಗ ಕುರುಬೂರು ಶಾಂತಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಟಿ.ನರಸೀಪುರದ ಅಭ್ಯರ್ಥಿ ಮಹದೇವಪ್ಪ ಅವರನ್ನು ಸೋಲಿಸುವುದು ಕಬ್ಬು ಬೆಳೆಗಾರರ ಗುರಿ. ಇವರಿಬ್ಬರ ವಿರುದ್ಧ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ಮೈಸೂರು(ಏ.28): ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ, ವಾಗ್ದಾಳಿಗಳ ಭರಾಟೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಣತೊಟ್ಟಿವೆ.
ಜಯಗಳಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ವಿವಿಧ ಸಂಘಟನೆಗಳನ್ನು ಓಲೈಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಈ ನಡುವೆ ಮೈಸೂರಿನಲ್ಲಿ ಕಬ್ಬು ಬೆಳೆಗಾರರು ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪಟ್ಟಣದ ಗಸ್ ಹೌಸ್ ಬಳಿಯ ಕುವೆಂಪು ಪಾರ್ಕ್’ನಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಜಿ.ಟಿ.ದೇವೇಗೌಡ ಸಭೆಗೆ ಆಗಮಿಸಿ ಬೆಂಬಲ ಕೋರಿದಾಗ ಕುರುಬೂರು ಶಾಂತಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಟಿ.ನರಸೀಪುರದ ಅಭ್ಯರ್ಥಿ ಮಹದೇವಪ್ಪ ಅವರನ್ನು ಸೋಲಿಸುವುದು ಕಬ್ಬು ಬೆಳೆಗಾರರ ಗುರಿ. ಇವರಿಬ್ಬರ ವಿರುದ್ಧ ಜಾಗೃತಿ ಮೂಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ಕೂಡ  ಬೆಂಬಲ ನೀಡಲು ಮನವಿ ಮಾಡಿದರು.

click me!