22 ಲಕ್ಷ ಕೊಟ್ಟು ಸಮಾವೇಶಕ್ಕೆ ಜನ ಸೇರಿಸಿದ್ರಾ ಎಚ್’ಡಿಕೆ?

Published : Apr 30, 2018, 12:50 PM IST
22  ಲಕ್ಷ ಕೊಟ್ಟು ಸಮಾವೇಶಕ್ಕೆ ಜನ ಸೇರಿಸಿದ್ರಾ ಎಚ್’ಡಿಕೆ?

ಸಾರಾಂಶ

ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.  ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಜಮೀರ್ ಅಹ್ಮದ್ ಎಚ್’ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

ರಾಮನಗರ (ಏ. 30): ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಜಮೀರ್ ಅಹ್ಮದ್ ಎಚ್’ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

ನನ್ನ ಬಗ್ಗೆ ಮಾತನಾಡುವುದಕ್ಕೆ ಅವನು ಯಾರು?  ನಾನು ಚನ್ನಪಟ್ಟಣ ರಾಮನಗರಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು? 22 ಲಕ್ಷ ಹಣ ಹಂಚಿ ಕುಮಾರಸ್ವಾಮಿ‌ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ.  ನಾನು ಬಂದಾಗ ತಡರಾತ್ರಿಯವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ರು.  ಕುಮಾರಸ್ವಾಮಿ ಹಣ‌ಕೊಟ್ರು ಸೇರಿದ್ದು 200 ಜನ ಮಾತ್ರ. ಹಣಕೊಟ್ಟು ಜನ ಸೇರಿಸುತ್ತಾನೆ.  ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ ಎಂದು ಜಮೀರ್ ಅಹ್ಮದ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ. ರಾಜ್ಯದ 52 ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ನಮ್ಮ  ಸಮುದಾಯದ ಜನರನ್ನ ತುರುಕರು, ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ.  ನನ್ನ ಜನ ಕಾಸಿಗೆ ಬದುಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ