ಮತದಾನ ಮಾಡದ ಜನಾರ್ದನ ರೆಡ್ಡಿ

Published : May 12, 2018, 03:50 PM IST
ಮತದಾನ ಮಾಡದ ಜನಾರ್ದನ ರೆಡ್ಡಿ

ಸಾರಾಂಶ

ಜನಾರ್ದನ್ ರೆಡ್ಡಿಅಕ್ರಮ ಗಣಿಗಾರಿಕೆ,ಭ್ರಷ್ಟಾಚಾರ ಆರೋಪದ ಮೇಲೆ 2015ರಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಬಿಜೆಪಿ ಹಾಗೂ ಸಹೋದರರ ಪರ ಪ್ರಚಾರಕ್ಕೆ 10 ದಿನಗಳ ಕಾಲ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಜನಾರ್ದನ ರೆಡ್ಡಿ ಪುತ್ರ ಮೊದಲ ಬಾರಿಗೆ ಮತದಾನ ಚಲಾಯಿಸಿದ್ದಾರೆ.

ಬಳ್ಳಾರಿ(ಮೇ.12): ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಭಾವಿ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಈ ಬಾರಿ ಮತದಾನ ಮಾಡಿಲ್ಲ.
ಅಕ್ರಮ ಗಣಿ ಹಗರಣದ ಆರೋಪದಲ್ಲಿ ಜಾಮೀನಿ ಪಡೆದಿರುವ ರೆಡ್ಡಿಗೆ ಬಳ್ಳಾರಿಗೆ ಆಗಮಿಸುವಂತಿಲ್ಲ ಹಾಗೂ ಸ್ವಕ್ಷೇತ್ರ ಬಳ್ಳಾರಿಯಲ್ಲಿ ಪ್ರಚಾರ ನಡೆಸುವಂತಿಲ್ಲಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಜನಾರ್ದನ್ ರೆಡ್ಡಿಅಕ್ರಮ ಗಣಿಗಾರಿಕೆ,ಭ್ರಷ್ಟಾಚಾರ ಆರೋಪದ ಮೇಲೆ 2015ರಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಬಿಜೆಪಿ ಹಾಗೂ ಸಹೋದರರ ಪರ ಪ್ರಚಾರಕ್ಕೆ 10 ದಿನಗಳ ಕಾಲ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಜನಾರ್ದನ ರೆಡ್ಡಿ ಪುತ್ರ ಮೊದಲ ಬಾರಿಗೆ ಮತದಾನ ಚಲಾಯಿಸಿದ್ದಾರೆ.
ರೆಡ್ಡಿ ಸಹೋದರರರಾದ ಕರುಣಾಕರ ರೆಡ್ಡಿ ಹರಪ್ಪನಹಳ್ಳಿಯಿಂದ, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಹಾಗೂ ಆಪ್ತ ಸ್ನೇಹಿತ ಶ್ರೀರಾಮುಲು ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ರಾಜ್ಯದ ೨೨೨ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 1.30ರ ವೇಳೆಗೆ ಶೇ.56 ರಷ್ಟು ಮತದಾನವಾಗಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ