
ಬೆಂಗಳೂರು (ಮೇ. 12): ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 158 ರಲ್ಲಿ ಇಲ್ಲಿಯವರೆಗೆ ಒಂದೇ ಒಂದು ವೋಟ್ ಕೂಡ ಆಗಿಲ್ಲ.
ಬೆಳಿಗ್ಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮತಯಂತ್ರ ಸರಿ ಹೋಗದ ಕಾರಣ ದುರಸ್ಥಿಗೆ ತೆಗೆದುಕೊಂಡು ಹೋಗಲಾಗಿದೆ. ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ದುರಸ್ಥಿಗೆ ಹೋದ ಅಧಿಕಾರಿಗಳು ಇನ್ನೂ ವಾಪಸ್ಸಾಗಿಲ್ಲ. ಬೆಳಿಗ್ಗೆಯಿಂದ ಇದುವರೆಗೂ ಒಂದೇ ಒಂದು ವೋಟ್ ಆಗಿಲ್ಲ.