ಇವೆರಡು ಕ್ಷೇತ್ರಗಳಲ್ಲಿ ಭರ್ಜರಿ ತ್ರಿಕೋನ ಕದನ

First Published May 1, 2018, 3:25 PM IST
Highlights

ಬಿಜೆಪಿಯ ಬೆಂಬಲಿಗರ ಪಡೆಯನ್ನು ತಮ್ಮೊಟ್ಟಿಗೆ ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಗೋಪಾಲ ಕಾರಜೋಳ ಹಾಗೂ ಕಳೆದ ಬಾರಿ ಕೇವಲ 667 ಮತಗಳ ಅಂತರದಿಂದ ಪರಾಭವಗೊಂಡಿದ್ದ ಜೆಡಿಎಸ್ ಅಭ್ಯರ್ಥಿ ದೇವಾನಂದ
ಚವ್ಹಾಣ ಅವರು ಪೈಪೋಟಿ ಒಡ್ಡಿದ್ದಾರೆ. 

ನಾಗಠಾಣ
ಮೀಸಲು ಕ್ಷೇತ್ರವಾದ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಠಲ ಕಟಕದೊಂಡ ಅವರಿಗೆ ಟಿಕೆಟ್ ಕೈ ತಪ್ಪಿತು. ಅವರ ಬದಲಿಗೆ ಮಾಜಿ ಸಚಿವ ಗೋವಿಂದ ಕಾರಜೋಳ ಪುತ್ರ ಡಾ. ಗೋಪಾಲ ಕಾರಜೋಳಗೆ ನೀಡಲಾಯಿತು. ಹೀಗಾಗಿ ಬಿಜೆಪಿ ತೊರೆದ ಕಟಕದೊಂಡ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದುಕೊಂಡರು. ಅಲ್ಲದೆ, ಬಿಜೆಪಿಯ ಬೆಂಬಲಿಗರ ಪಡೆಯನ್ನು ತಮ್ಮೊಟ್ಟಿಗೆ ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಗೋಪಾಲ ಕಾರಜೋಳ ಹಾಗೂ ಕಳೆದ ಬಾರಿ ಕೇವಲ 667 ಮತಗಳ ಅಂತರದಿಂದ ಪರಾಭವಗೊಂಡಿದ್ದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಅವರು ಪೈಪೋಟಿ ಒಡ್ಡಿದ್ದಾರೆ. ದೇವಾನಂದ ಅವರು ಈ ಚುನಾವಣೆಯಲ್ಲಿ ಅನುಕಂಪದ ಅಲೆಯ ಲಾಭ ಪಡೆಯಲು ಅವರು ಹವಣಿಸುತ್ತಿದ್ದಾರೆ.ಗೋಪಾಲ ಕಾರಜೋಳಗೆ ಬಿಜೆಪಿ ವರ್ಚಸ್ಸಿನ ಬಲವಿದೆ.

ರೋಣ
ಹಾಲಿ ಶಾಸಕ ಜಿ.ಎಸ್. ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಮಾಜಿ ಸಚಿವ ಕಳಕಪ್ಪ ಬಂಡಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಜಕ್ಕಲಿ ದೊಡ್ಡಮೇಟಿ ಕುಟುಂಬದ ಕುಡಿ ರವೀಂದ್ರನಾಥ ದೊಡ್ಡಮೇಟಿ ಅವರು ಜೆಡಿಎಸ್ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶಾಸಕ ಜಿ.ಎಸ್. ಪಾಟೀಲರಿಗೆ ಆಡಳಿತ ವಿರೋಧಿ ಅಲೆ ಅಲ್ಪ ಅಡ್ಡಿಯಾಗುತ್ತಿದೆ. ಬಿಜೆಪಿಯ ಕಳಕಪ್ಪ ಬಂಡಿ ಅವರಿಗೆ ಅವರ ಜಾತಿ ಬಲ ಹಾಗೂ ಅನ್ಯ ಪಕ್ಷಗಳಿಂದ ಬಿಜೆಪಿ ಸೇರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಲಾಭವಾಗುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ದೊಡ್ಡಮೇಟಿ ಕುಟುಂಬಕ್ಕೆ ವಿಶೇಷ ಗೌರವ ಇದೆ. ಅದರೊಟ್ಟಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವರ್ಚಸ್ಸು ಹಾಗೂ ಕಾರ್ಯಕರ್ತರ ಶ್ರಮ ಸೇರಿದಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆ ಅಲ್ಲಗಳೆಯಲಾಗದು. 

click me!