ಉಡುಪಿ ಮಠಕ್ಕೆ ಮೋದಿ ಭೇಟಿ ನೀಡುತ್ತಿಲ್ಲ !

First Published May 1, 2018, 3:11 PM IST
Highlights

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾನು ಅಲ್ಲಿನ ದೇಗುಲಗಳಿಗೆ ಭೇಟಿ ನೀಡುವುದಿಲ್ಲ, ಇಂತಹ ಭೇಟಿಗಳನ್ನು ಕೇವಲ ರಾಜಕೀಯಕ್ಕೆ ಮಾತ್ರ ಮೀಸಲಿಡುತ್ತೇನೆ, ದೇಗುಲಗಳಿಗೆ ಚುನಾವಣೆ ನಂತರ ಭೇಟಿ ನೀಡುತ್ತೇನೆ ಎಂದು ಮೋದಿ ಅವರು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಉಡುಪಿಗೆ ಚುನಾವಣಾ ಪ್ರಚಾರಕ್ಕೆ  ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅನತಿ ದೂರದಲ್ಲಿರುವ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿಲ್ಲ. ಒಮ್ಮೆ ಕೃಷ್ಣ ಮಠಕ್ಕೆ ಬರುತ್ತಾರೆ, ಮತ್ತೊಮ್ಮ ಬರುವುದಿಲ್ಲ, ಮಗದೊಮ್ಮೆ ಬರುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಕೊನೆಗೂ ಪ್ರಧಾನಿ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾನು ಅಲ್ಲಿನ ದೇಗುಲಗಳಿಗೆ ಭೇಟಿ ನೀಡುವುದಿಲ್ಲ, ಇಂತಹ ಭೇಟಿಗಳನ್ನು ಕೇವಲ ರಾಜಕೀಯಕ್ಕೆ ಮಾತ್ರ ಮೀಸಲಿಡುತ್ತೇನೆ, ದೇಗುಲಗಳಿಗೆ ಚುನಾವಣೆ ನಂತರ ಭೇಟಿ ನೀಡುತ್ತೇನೆ ಎಂದು ಮೋದಿ ಅವರು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಆದರೂ, ಆದಿ ಉಡುಪಿ ಹೆಲಿಪ್ಯಾಡ್‌ಗೆ ತೆರಳಿ ಮೋದಿ ಅವರನ್ನು ಮತ್ತೊಮ್ಮೆ ಮಠಕ್ಕೆ ಆಹ್ವಾಸಿದ್ದು ಮುಂದಿನ ನಿರ್ಧಾರ ಅವರದ್ದು ಎಂದು ಕೃಷ್ಣಮಠದ ವಕ್ತಾರ ಶ್ರೀಶ ಭಟ್  ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೃಷ್ಣ ಮಠಕ್ಕೆ ಭೇಟಿ ನೀಡದ್ದಕ್ಕೆ ಸ್ಥಳೀಯ ಬಿಜೆಪಿ ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಮೋದಿ ಭೇಟಿ ನೀಡದಿರುವುದು ಬಿಜೆಪಿ ಪಾಳೇಯದಲ್ಲಿ ತೀವ್ರ ಮುಜುಗರವನ್ನುಂಟು ಮಾಡಿದೆ.

ಆದರೆ ಇದಕ್ಕೆ ಸಮರ್ಥನೆ ನೀಡಿರುವ ಬಿಜೆಪಿ ಮುಖಂಡರು, ರಾಹುಲ್ ಗಾಂಧಿ ಅವರಿಗೆ ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ದೇವಾಲಯಗಳ ನೆನಪಾಗುವುದು, ಅವರ ಈ ಭೇಟಿಯ ಹಿಂದೆ ಓಟಿನ ರಾಜಕೀಯ ಇದೆ. ಅವರಂತೆ ಮೋದಿ ಚುನಾವಣೆಗಾಗಿ ಟೆಂಪಲ್ ರನ್ ಮಾಡುವವರಲ್ಲ, ಅದ್ದರಿಂದ ಕೃಷ್ಣಮಠಕ್ಕೂ ಹೋಗುವುದಿಲ್ಲ, ಕೃಷ್ಣಮಠಕ್ಕೆ ಮುಂದೆ ಖಂಡಿತಾ ಭೇಟಿ ನೀಡುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

click me!