ಜಯನಗರ ಚುನಾವಣೆ : ಬಿಜೆಪಿ ಅಭ್ಯರ್ಥಿ ಯಾರು..?

First Published May 18, 2018, 11:37 AM IST
Highlights

ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜಯನಗರ ಚುನಾವಣೆಗೆ ದಿನಾಂಕ ನಿಗದಿ ಯಾದ ಬೆನ್ನಲ್ಲೆ ಬಿಜೆಪಿ ಯಿಂದ ಯಾರನ್ನು ಕಣಕ್ಕಿಳಿಸ ಬೇಕೆಂಬ ಚರ್ಚೆ ಆರಂಭವಾಗಿದೆ. 

ಬೆಂಗಳೂರು (ಮೇ 18) : ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜಯನಗರ ಚುನಾವಣೆಗೆ ದಿನಾಂಕ ನಿಗದಿ ಯಾದ ಬೆನ್ನಲ್ಲೆ ಬಿಜೆಪಿ ಯಿಂದ ಯಾರನ್ನು ಕಣಕ್ಕಿಳಿಸ ಬೇಕೆಂಬ ಚರ್ಚೆ ಆರಂಭವಾಗಿದೆ. ನಿಧನ ಹೊಂದಿದ ಬಿ. ಎನ್. ವಿಜಯಕುಮಾರ್ ಅವರ ಸಹೋದರನ ಪುತ್ರ ರಾಮು, ಮಾಜಿ ಮೇಯರ್ ಎಸ್.ಕೆ. ನಟರಾಜ್, ಬಿಬಿಎಂಪಿ ಮಾಜಿ ಸದಸ್ಯ ರಾಮಮೂರ್ತಿ, ಹಾಲಿ ಸದಸ್ಯ ನಾಗರಾಜ್ ಅವರ ಹೆಸರು ಮೊದಲ ಹಂತದಲ್ಲಿ ಕೇಳಿಬಂದಿವೆ.

ಇವರೆಲ್ಲರೂ ಸ್ಥಳೀಯರು. ಸಂಖ್ಯಾ ಬಲದ ದೃಷ್ಟಿಯಿಂದ ಈ ಚುನಾವಣೆ ಮುಖ್ಯವಾಗಿದ್ದರಿಂದ ಸ್ಥಳೀಯರ ಒಬ್ಬರಿಗೆ ಟಿಕೆಟ್ ನೀಡಿದರೂ ಇನ್ನುಳಿದವರು ಸಹಕರಿಸಲಿಕ್ಕಿಲ್ಲ ಎಂಬ ಅನುಮಾನ ಪಕ್ಷದ ನಾಯಕರಿಗಿದೆ. ಜತೆಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಗಿ ರುವುದರಿಂದ ಮತ್ತು ಜೆಡಿಎಸ್ ಜತೆ ಮೈತ್ರಿ ಸಾಧ್ಯತೆ ಇರುವು ದರಿಂದ ಪಕ್ಷದಿಂದ ಪ್ರಬಲ ಅಭ್ಯರ್ಥಿ ಯನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಸ್ಥಳೀಯರು ಬೇಡ ಎಂಬ ನಿರ್ಧಾರ ಕೈಗೊಂಡಲ್ಲಿ ಆಗ ಎಮ್‌ಎಲ್‌ಸಿ ಆಗಿರುವ ನಟಿ ತಾರಾಅನು ರಾಧಾ ಅವರನ್ನು ಕಣಕ್ಕಿಳಿಸುವ ಸಂಭವವೂ ಇದೆ. ಜತೆಗೆ ಪಕ್ಷದ ರಾಜ್ಯ ಖಜಾಂಚಿಯೂ ಆಗಿರುವ ಸುಬ್ಬ ನರಸಿಂಹ ಅವರ ಹೆಸರೂ ಕೇಳಿಬಂದಿದ್ದು, ಒಟ್ಟಾರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

click me!