ಬಹುಮತ ಸಾಬೀತಿಗೆ ಬೇರೆ ಪಕ್ಷದ ಶಾಸಕರನ್ನು ಸೆಳೆಯಲು ಆರ್ ಎಸ್ ಎಸ್ ವಿರೋಧ?

First Published May 22, 2018, 5:16 PM IST
Highlights

ಬಿಜೆಪಿಗೆ 104  ಸ್ಥಾನಗಳು ಬಂದು ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾದಾಗ ಆರ್‌ಎಸ್‌ಎಸ್ ಮಾತ್ರ ಯಾವುದೇ ಕಾರಣಕ್ಕೂ ಬೇಡ, ಕುದುರೆ ವ್ಯಾಪಾರದ ಕಳಂಕ ದೇಶದ ತುಂಬೆಲ್ಲ  ಚರ್ಚೆ ಆಗುತ್ತದೆ ಎಂದು ಅಮಿತ್ ಶಾಗೆ ಹೇಳಿತಂತೆ.

ಬೆಂಗಳೂರು (ಮೇ. 22):  ಬಿಜೆಪಿಗೆ 104  ಸ್ಥಾನಗಳು ಬಂದು ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾದಾಗ ಆರ್‌ಎಸ್‌ಎಸ್ ಮಾತ್ರ ಯಾವುದೇ ಕಾರಣಕ್ಕೂ ಬೇಡ, ಕುದುರೆ ವ್ಯಾಪಾರದ ಕಳಂಕ ದೇಶದ ತುಂಬೆಲ್ಲ ಚರ್ಚೆ ಆಗುತ್ತದೆ ಎಂದು ಅಮಿತ್ ಶಾಗೆ ಹೇಳಿತಂತೆ.

ಆದರೆ ಕೊನೆಗೆ ಅಮಿತ್ ಶಾ ಅವರು ಯಡಿಯೂರಪ್ಪ ಹೇಳಿಕೊಂಡಂತೆ 17 ಕ್ಕೆ ಸರ್ಕಾರ ರಚನೆ ಆಗಲಿ. ಹಾಗೆ ಮಾಡದಿದ್ದರೆ, ಮತದಾನಕ್ಕಿಂತ ಮೊದಲೇ ಪ್ರಮಾಣ ವಚನದ ಮೂಹೂರ್ತ ಫಿಕ್ಸ್ ಮಾಡಿಕೊಂಡಿದ್ದು ಲೇವಡಿಗೆ ಕಾರಣವಾಗುತ್ತದೆ. ಮತ್ತು ಸರ್ಕಾರ ರಚಿಸಿದರೆ, ಕಾಂಗ್ರೆಸ್ಸನ್ನು ಸೋಲಿಸಿ, ಅತಿದೊಡ್ಡ ಪಕ್ಷವಾಗಿ ಕಮಲ ಅರಳಿದ ಖಡಕ್ ಸಂದೇಶವನ್ನು ದೇಶಕ್ಕೇ ರವಾನಿಸಿದಂತಾಗುತ್ತದೆ. ಅಲ್ಲದೇ,  ಬಿಎಸ್‌ವೈ ಅವರನ್ನು ಸಿಎಂ ಮಾಡಲು ಪ್ರಯತ್ನಿಸದಿದ್ದರೆ  ಲಿಂಗಾಯತರು ಬೇಸರಗೊಳ್ಳಬಹುದು. ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಆಗಬಹುದು ಎಂದು ಬೆಂಬಲ ಇಲ್ಲದಿದ್ದರೂ ಸರ್ಕಾರ ರಚಿಸುವ ತೀರ್ಮಾನಕ್ಕೆ ಬಂದರಂತೆ.

ದಿಲ್ಲಿ ಬಿಜೆಪಿ  ನಾಯಕರು ಹೇಳುವ ಪ್ರಕಾರ ಶಾಸಕರನ್ನು ಸೆಳೆಯುವ ಜವಾಬ್ದಾರಿ ಯಡಿಯೂರಪ್ಪ, ಶ್ರೀರಾಮುಲು ವಹಿಸಿಕೊಂಡಿದ್ದರೇ ಹೊರತು  ಅಮಿತ್ ಶಾ ಈ ಬಗ್ಗೆ ವಿಪರೀತ ಉತ್ಸಾಹ ತೋರಿಸಿರಲಿಲ್ಲವಂತೆ. 

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗೆ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!