ಪಟ್ಟಾಭಿಷೇಕಕ್ಕೆ ಟೆಂಟ್ ರೆಡಿ : ಶಕ್ತಿಸೌಧದಲ್ಲಿ ಹೋಮಗಳದ್ದೆ ಸದ್ದು

First Published May 22, 2018, 5:12 PM IST
Highlights

ಬಹುಮತವಿಲ್ಲದ ಕಾರಣ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ದಿನದಿಂದ ಮೈತ್ರಿ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕವಲ್ಲದೆ ಅಕ್ಕಪಕ್ಕದ ರಾಜ್ಯಗಳ ದೇಗುಲಗಳ ದರ್ಶಗಳಲ್ಲಿ ಮುಳುಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬೆಂಗಳೂರು(ಮೇ.22): ಜಾತ್ಯಾತೀತ ಪದಕ್ಕೆ ಜೆಡಿಎಸ್ ಕಳೆದೆರಡು ದಿನಗಳಿಂದ ಕೊಂಚ ಬ್ರೇಕ್ ನೀಡಿ ಶಕ್ತಿಸೌಧದ ಸುತ್ತಲೂ ಹೋಮಹವನಗಳ ಮೂಲಕ ಭಕ್ತಿಪೂಜೆಯ ಸದ್ದು ಮಾಡುತ್ತಿದೆ.
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಮೇ.22ರಂದು ಪ್ರಮಾಣವಚನ ಸ್ವೀಕರಿಸಲಿದ್ದು ಇದಕ್ಕಾಗಿ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗ ಹೋಮಹವನ ಧ್ವನಿ ಮೊಳಗುತ್ತಿವೆ.  


ಬಹುಮತವಿಲ್ಲದ ಕಾರಣ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ದಿನದಿಂದ ಮೈತ್ರಿ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕವಲ್ಲದೆ ಅಕ್ಕಪಕ್ಕದ ರಾಜ್ಯಗಳ ದೇಗುಲಗಳ ದರ್ಶಗಳಲ್ಲಿ ಮುಳುಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ತಮ್ಮ ನಂಬಿಕೆಯಂತೆ ರೇಷ್ಮೆ ಉಡುಪು, ಚಪ್ಪಲಿ ಧರಿಸದೆ ಪ್ರಮಾಣವಚನ ಕೈಗೊಳ್ಳಲಿದ್ದಾರೆ ಎಂದು ಅವರ ಪಕ್ಷದ ಮೂಲಗಳು ತಿಳಿಸಿವೆ.


ಮೇ.22 ರಂದು ಮೈತ್ರಿ ಪಕ್ಷದ ಪರವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಕಾರಣ ಪೂರ್ವತಯಾರಿಗಳು ನಡೆಯುತ್ತಿವೆ. ಗಣ್ಯಾತಿಗಣ್ಯರಿಗಾಗಿ ಮುನ್ನೂರಕ್ಕೂ ಹೆಚ್ಚು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಕುಮಾರಸ್ವಾಮಿಯವರ ಜೊತೆ ಕಾಂಗ್ರೆಸಿನಿಂದ ಒಬ್ಬರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. 


ಯಾರ್ಯಾರು ಬರಲಿದ್ದಾರೆ
ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕೇರಳ ಮುಖ್ಯಮಂತ್ರಿ ಸಿಎಂ ಪಿಣರಾಯಿ ವಿಜಯನ್‌,  ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌, ನಟ ಕಮಲ್‌ ಹಾಸನ್‌ ಸೇರಿದಂತೆ ಇನ್ನೂ ಹಲವು ಗಣ್ಯರು ಆಗಮಿಸಲಿದ್ದಾರೆ.

click me!