ಸ್ಪೀಕರ್'ಗೆ ಜಿದ್ದಾಜಿದ್ದಿ : ಯಾರಿಗೆ ಪಟ್ಟ ?

First Published May 21, 2018, 8:06 PM IST
Highlights

ಪ್ರಮಾಣ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕುಮಾರಸ್ವಾಮಿ ಅವರು ಬಹುತೇಕ ರಮೇಶ್ ಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಪೈಕಿ ಓರ್ವರ ಹೆಸರು ಶಿಫಾರಸ್ಸು ಮಾಡಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು(ಮೇ.21): ಮೈತ್ರಿ ಸರ್ಕಾರ ರಚನೆಯಾಗುವ ಹಿನ್ನಲೆಯಲ್ಲಿ ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆ ಕುರಿತು ಕಸರತ್ತು ಮುಂದುವರಿದಿದೆ. 
ಹಿರಿಯ ಶಾಸಕರಿಗೆ ಜವಾಬ್ದಾರಿ ವಹಿಸಲು ಕಾಂಗ್ರೆಸ್ - ಜೆಡಿಎಸ್ ನಿಂದ ಸರ್ಕಸ್ ಆರಂಭವಾಗಿದೆ. ಸ್ಪೀಕರ್ ಹುದ್ದೆಗಾಗಿ ಜೆಡಿಎಸ್ ಮುಂದೆ  ಕಾಂಗ್ರೆಸ್ ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ. ಕೋಲಾರದಿಂದ ಜೆಡಿಎಸ್'ನಿಂದ ಒಬ್ಬರು ಸಚಿವರಾಗುವ ಕಾರಣ ಹಿರಿಯ ಸದಸ್ಯ ರಮೇಶ್ ಕುಮಾರ್'ಗೆ ಸ್ಪೀಕರ್ ಪಟ್ಟ ಕಟ್ಟಲು ಲೆಕ್ಕಾಚಾರ ಜೋರಾಗಿದೆ. ಒಂದು ವೇಳೆ 
ಸ್ಪೀಕರ್ ಆಗಲು ರಮೇಶ್ ಕುಮಾರ್ ಅವರು ಹಿಂದೇಟು ಹಾಕಿದರೆ ಹೆಚ್.ಕೆ.ಪಾಟೀಲ್'ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್'ನಲ್ಲಿ  ರಮೇಶ್ ಕುಮಾರ್, ಹೆಚ್.ಕೆ.ಪಾಟೀಲ್ ಇಬ್ಬರ ಹೆಸರು ಪ್ರಸ್ತಾಪವಾಗಿದೆ. ಪ್ರಮಾಣ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕುಮಾರಸ್ವಾಮಿ ಅವರು ಬಹುತೇಕ ರಮೇಶ್ ಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಪೈಕಿ ಓರ್ವರ ಹೆಸರು ಶಿಫಾರಸ್ಸು ಮಾಡಲಿದ್ದಾರೆ ಎನ್ನಲಾಗಿದೆ. ಇವರಿಬ್ಬರಲ್ಲಿ ಒಬ್ಬರನ್ನು ಸ್ಪೀಕರ್ ಆಗಿ ನೇಮಕ ಮಾಡಲು ಎರಡೂ ಪಕ್ಷಗಳಿಂದಲೂ ಒಲವಿದೆ .

click me!