ಚುನಾವಣಾ ರಾಯಭಾರಿಗಳಾಗಿ ಅಶ್ವಿನಿ ಅಂಗಡಿ, ಗಿರೀಶ್ ಆಯ್ಕೆ

First Published May 1, 2018, 12:55 PM IST
Highlights

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಮತ್ತು ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಬೆಳಕು ಅಕಾಡೆಮಿ  ಸಂಸ್ಥಾಪಕಿ ಹಾಗೂ ಅಂಧರಿಗಾಗಿ ಕೆಲಸ ಮಾಡುತ್ತಿರುವ ಅಶ್ವಿನಿ ಅಂಗಡಿ ಮತ್ತು ಪ್ಯಾರಾ ಒಲಂಪಿಕ್ ಕ್ರೀಡಾಪಟು ಗಿರೀಶ್ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಿದೆ.

ಬೆಂಗಳೂರು (ಮೇ. 01): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಮತ್ತು ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಬೆಳಕು ಅಕಾಡೆಮಿ  ಸಂಸ್ಥಾಪಕಿ ಹಾಗೂ ಅಂಧರಿಗಾಗಿ ಕೆಲಸ ಮಾಡುತ್ತಿರುವ ಅಶ್ವಿನಿ ಅಂಗಡಿ ಮತ್ತು ಪ್ಯಾರಾ ಒಲಂಪಿಕ್ ಕ್ರೀಡಾಪಟು ಗಿರೀಶ್ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮತದಾರರ ಜಾಗೃತಿ ಮೂಡಿಸುವ ಕುರಿತ ಅಶ್ವಿನಿ ಅಂಗಡಿ ಮತ್ತು ಗಿರೀಶ್ ಅವರ ಸಂದೇಶವುಳ್ಳ ವಿಡಿಯೋವನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಂಜೀವ್ ಕುಮಾರ್, ಅಂಗವಿಕಲರನ್ನು ಮತಗಟ್ಟಿಗೆ ಆಕರ್ಷಿಸಲು ಅಶ್ವಿನಿ ಅಂಗಡಿ ಮತ್ತು ಗಿರೀಶ್ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮತದಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಮುಖ್ಯ ಅಂಗವಿಕರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ರಾಜ್ಯದಲ್ಲಿ  3,40,276 ಅಂಗವಿಕಲರಿದ್ದು, ಈ ಪೈಕಿ 3,35,966 ಮಂದಿ ಮತದಾರರಾಗಿ ನೋಂದಾಯಿಸಿ ಕೊಂಡಿದ್ದಾರೆ. ಪ್ರತಿ  ಮತಗಟ್ಟೆಯಲ್ಲಿಯೂ ಅಂಗವಿಕಲರು ಸುಲಭವಾಗಿ ಮತಗಟ್ಟೆ ಪ್ರವೇಶಿಸಲು ಅನುಕೂಲವಾಗಲೆಂದು ರ್ಯಾಂಪ್’ಗಳನ್ನು  ನಿರ್ಮಿಸಲಾಗಿದ್ದು, ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಅವರ ಸಹಾಯಕ್ಕಾಗಿ ಸ್ವಯಂ ಸೇವಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸುಲಭವಾಗಿ ಮತದಾನ ಮಾಡಲು ಅವರು ಸರತಿಯಲ್ಲಿ ನಿಲ್ಲುವ ಬದಲು ನೇರವಾಗಿ ಮತ ಚಲಾಯಿಸಲು  ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಮತಯಂತ್ರದಲ್ಲಿ ಅಂಧ ವ್ಯಕ್ತಿಗಳಿಗಾಗಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಳಕೆ ಮಾಡುವ ಮತಯಂತ್ರದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆ  ಮಾಡಲಾಗಿದೆ. ಅಂಕಿ-ಸಂಖ್ಯೆ ಎಣಿಕೆ ಮಾಡಲು ಸುಲಭವಾಗಲಿ ಎಂಬ ಉದ್ದೇಶದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎರಡು ದೃಷ್ಟಿ ಮಂದವುಳ್ಳ  ವ್ಯಕ್ತಿಗಳಿಗಾಗಿ ಭೂತಗನ್ನಡಿಯನ್ನು  ನೀಡಲಾಗುತ್ತದೆ ಎಂದರು. 

click me!