2019 ರಲ್ಲಿ ಮತ್ತೆ ಮೋದಿಯೇ ಪ್ರಧಾನಿ!

First Published May 9, 2018, 8:55 AM IST
Highlights

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳ ಉದ್ಯಮಿಗಳು 2019 ರಲ್ಲಿ ಮತ್ತೆ ನರೇಂದ್ರ ಮೋದಿ ಅವರೇ  ಗೆದ್ದು ಭಾರತ ಪ್ರಧಾನಿಯಾಗುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೂ ಅವರು ನಂಬಿದ್ದು, ಅದಕ್ಕಾಗಿ ಈ ಚುನಾವಣೆಯನ್ನು ಗಮನಿಸುತ್ತಿದ್ದಾರೆ ಎಂದು ಜಾಗತಿಕ ಹಣಕಾಸು ಸೇವೆ ಪೂರೈಕೆದಾರ ಕಂಪನಿ ಯುಬಿಎಸ್ ತಿಳಿಸಿದೆ.

ನವದೆಹಲಿ (ಮೇ. 09): ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳ ಉದ್ಯಮಿಗಳು 2019 ರಲ್ಲಿ ಮತ್ತೆ ನರೇಂದ್ರ ಮೋದಿ ಅವರೇ  ಗೆದ್ದು ಭಾರತ ಪ್ರಧಾನಿಯಾಗುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೂ ಅವರು ನಂಬಿದ್ದು, ಅದಕ್ಕಾಗಿ ಈ ಚುನಾವಣೆ ಯನ್ನು ಗಮನಿಸುತ್ತಿದ್ದಾರೆ ಎಂದು ಜಾಗತಿಕ ಹಣಕಾಸು ಸೇವೆ ಪೂರೈಕೆದಾರ ಕಂಪನಿ ಯುಬಿಎಸ್ ತಿಳಿಸಿದೆ.

‘ಕಳೆದ ತಿಂಗಳು ನಾವು ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟದ ಸುಮಾರು 50 ಕ್ಕೂ ಹೆಚ್ಚು ಉದ್ಯಮಿಗಳನ್ನು ಮಾತನಾಡಿಸಿದ್ದೇವೆ. ಅವರೆಲ್ಲ 2019 ರಲ್ಲಿ ಮೋದಿ ಮತ್ತೆ  ಗೆಲ್ಲುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಕರ್ನಾಟಕದ ಚುನಾವಣೆಯು ದೇಶದಲ್ಲಿರುವ ರಾಜಕೀಯ ವಾತಾವರಣದ ದಿಕ್ಸೂಚಿ  ಎಂದೂ ಅವರು ನಂಬಿದ್ದಾರೆ. ಅದಕ್ಕಾಗಿ  ಕರ್ನಾಟಕದ ಚುನಾವಣೆ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ’ ಎಂದು ಯುಬಿಎಸ್ ಹೇಳಿದೆ. ಇದೇ ವೇಳೆ, 2019 ನೇ ಸಾಲಿನಲ್ಲಿ ಭಾರತದ ಆರ್ಥಿಕಾಭಿವೃದ್ಧಿಯು ಇನ್ನಷ್ಟು ವೇಗ ಪಡೆಯಲಿದೆ ಎಂದೂ ಅವರೆಲ್ಲ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ. 

click me!