ಎಚ್‌ಡಿಕೆ 5 ವರ್ಷ ಸಿಎಂ ಬಗ್ಗೆ ಇನ್ನೂ ನಿರ್ಧಾರ ಇಲ್ಲ: ಪರಂ

First Published May 23, 2018, 8:08 AM IST
Highlights

 ‘ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ಮುಂದೆ ಜೆಡಿಎಸ್‌ ಜತೆ ಕುಳಿತು ಚರ್ಚೆ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್‌ ಹೇಳಿದ್ದಾರೆ.
 

 ಬೆಂಗಳೂರು :  ‘ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ಮುಂದೆ ಜೆಡಿಎಸ್‌ ಜತೆ ಕುಳಿತು ಚರ್ಚೆ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಎಷ್ಟುವರ್ಷ ಸಿಎಂ ಆಗಿರಬೇಕು ಎಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ವಿಶ್ವಾಸ ಮತ ಸಾಬೀತಿನ ಬಳಿಕ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.

‘ನಮ್ಮ ಮೈತ್ರಿ ಸರ್ಕಾರ ಯಾವ ಮಾದರಿ ಸರ್ಕಾರವಾಗಿರಬೇಕು ಎಂಬುದನ್ನು ನಾವಿನ್ನೂ ಚರ್ಚೆ ಮಾಡಿಲ್ಲ. ಇಲ್ಲಿ ಯಾರು ಮಂತ್ರಿಯಾಗಬೇಕು ಹಾಗೂ ಯಾವ ಪಕ್ಷಕ್ಕೆ ಎಷ್ಟುಸ್ಥಾನ ಕೊಡಬೇಕು ಎಂಬುದು ಚರ್ಚೆ ಮಾಡಿಲ್ಲ. ಪ್ರಮಾಣವಚನ ಸ್ವೀಕಾರದ ಬಳಿಕವೇ ಇದನ್ನು ಚರ್ಚೆ ಮಾಡುತ್ತೇವೆ’ ಎಂದರು.

5 ವರ್ಷ ಅವಧಿಗೆ ತಾವೇ ಮುಖ್ಯಮಂತ್ರಿ ಎಂಬುದಾಗಿ ಕಾಂಗ್ರೆಸ್‌ ಒಪ್ಪಿದೆ ಎಂದು 2 ದಿವಸದ ಹಿಂದೆ ಕುಮಾರಸ್ವಾಮಿ ಅವರು ತಮಿಳುನಾಡಿನ ಶ್ರೀರಂಗಂನಲ್ಲಿ ಹೇಳಿದ್ದರು. ಆದರೆ ಈ ಬಗ್ಗೆ ನಿರ್ಧಾರ ಆಗಿಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ದಿಲ್ಲಿಯಲ್ಲಿ ಸೋಮವಾರ ಸ್ಪಷ್ಟಪಡಿಸಿದ್ದರು.

click me!