ವಿಧಾನ ಪರಿಷತ್ 11 ಸ್ಥಾನಕ್ಕೆ ಜೂ.11 ರಂದು ಚುನಾವಣೆ

First Published May 23, 2018, 7:50 AM IST
Highlights

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ  ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿಂದಿನ ದಿನವೇ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. 

ಬೆಂಗಳೂರು/ನವದೆಹಲಿ : ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ  ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿಂದಿನ ದಿನವೇ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಬರುವ ಜೂ.11 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳ ಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಪ್ರಕಟಣೆ ಹೊರಡಿಸಿದೆ.ಈಗ ನಡೆಯುವ ಚುನಾವಣೆಯಲ್ಲಿ ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಐದು ಸ್ಥಾನಗಳು, ಕಾಂಗ್ರೆಸ್ಸಿಗೆ ನಾಲ್ಕು ಮತ್ತು ಜೆಡಿಎಸ್‌ಗೆ ಎರಡು ಸ್ಥಾನಗಳು ಲಭಿಸಲಿವೆ ಎನ್ನಲಾಗಿದೆ.

ಮೇ 24 ರಂದು ಅಧಿಸೂಚನೆ: ಮೇ 24 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, 31  ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಜೂ.1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ. 4 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜೂ.11ರಂದು ಬೆಳಗ್ಗೆ9ರಿಂದ ಸಂಜೆ 4 ರ ತನಕ ಚುನಾವಣೆ ನಡೆಯಲಿದೆ. 5 ಗಂಟೆ ನಂತರ ಮತಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದೆು, ಫಲಿತಾಂಶ ಪ್ರಕಟವಾಗಲಿ

ಕಾಂಗ್ರೆಸ್ ಆಕಾಂಕ್ಷಿಗಳು
೧. ರಾಮಚಂದ್ರಪ್ಪ
೨. ಸಿ.ಎಂ.ಇಬ್ರಾಹಿಂ
೩. ಎಂ.ಆರ್.ಸೀತಾರಾಂ
೪. ಕೆ.ಗೋವಿಂದರಾಜು
೫. ಯು.ಬಿ.ವೆಂಕಟೇಶ್
೬. ರಾಣಿ ಸತೀಶ್

ಬಿಜೆಪಿಯ
ಸಂಭಾವ್ಯರು
೧. ಡಿ.ಎಸ್.ವೀರಯ್ಯ
೨. ಬಿ.ಜೆ.ಪುಟ್ಟಸ್ವಾಮಿ
೩. ಭಾನುಪ್ರಕಾಶ್
೪. ಅಶ್ವತ್ಥನಾರಾಯಣ
೫. (ಚರ್ಚೆ ನಡೆಯುತ್ತಿದೆ)

ಜೆಡಿಎಸ್‌ನ
ಆಕಾಂಕ್ಷಿಗಳು
೧. ಬಿ.ಎಂ.ಫಾರೂಕ್
೨. ಆರ್.ಪ್ರಕಾಶ್
೩. ಎನ್.ಎಚ್.ಕೋನರಡ್ಡಿ
೪. ಪಟೇಲ್ ಶಿವರಾಮ್
೫. ವೈಎಸ್‌ವಿ ದತ್ತಾ

click me!