ಯಾವ್ಯಾವ ಅಭ್ಯರ್ಥಿಗಳು ಎಷ್ಟು ಮತಗಳಿಂದ ಮುನ್ನಡೆ ..?

First Published May 15, 2018, 9:32 AM IST
Highlights

ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಅಭ್ಯರ್ಥಿಗಳ ವಿವರ ಇಂತಿದೆ. 

ಬೆಂಗಳೂರು : ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 

ಧಾರವಾಡದಲ್ಲಿ ವಿನಯ್ ಕುಲಕರ್ಣಿ 1847 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ. 

ಕಡೂರಿನಲ್ಲಿ ವೈಎಸ್ ವಿ ದತ್ತಾ ಮುನ್ನಡೆ ಸಾಧಿಸಿದ್ದಾರೆ. 

ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 6580ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಕನಕಪುರದಲ್ಲಿ ಬಿಜೆಪಿ ಜೆಡಿಎಸ್ ಹಿಂದಿಕ್ಕಿದ ಡಿ.ಕೆ ಶಿವಕುಮಾರ್ 4200ಮತಗಿಂದ ಮುನ್ನಡೆ ಸಾಧಿಸಿದ್ದಾರೆ. 

ಇನ್ನುಳಿದಂತೆ  ಹೊಳೆನರಸೀಪುರದಲ್ಲಿ ಎಚ್.ಎಂ ರೇವಣ್ಣ 2000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿ 1000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 2 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಸರ್ವಜ್ಞನಗರದಲ್ಲಿ ಕೆ.ಜೆ ಜಾರ್ಜ್ 1300 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಮಲ್ಲೇಶ್ವರಂನಲ್ಲಿ ಬಿಜೆಪಿಯ ಅಶ್ವಥ್ ನಾರಾಯಣ್  3 ಸಾವಿರ ಮತಗಳಿಂದ  ಮುನ್ನಡೆ ಸಾಧಿಸಿದ್ದಾರೆ. 

ಇನ್ನು ಚಾಮುಂಡೇಶ್ವರಿಯಲ್ಲಿ ಜಿ.ಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಅವರನ್ನು 12 ಸಾವಿರ ಮತಗಳಿಂದ ಹಿಂದಿಕ್ಕಿದ್ದಾರೆ. 

ಹೆಬ್ಬಾಳದಲ್ಲಿ ಬಿಜೆಪಿಯನಾರಾಯಣ ಸ್ವಾಮಿ 1000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಯುಟಿ ಖಾದರ್ 7023 ಮತಗಳಿಂದ ಮುನ್ನಡೆ  ಸಾಧಿಸಿದ್ದಾರೆ. 

ಶಿವಮೊಗ್ಗದಲ್ಲಿ ಈಶ್ವರಪ್ಪ  1800 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಲೈವ್‌ ಬ್ಲಾಗ್

click me!