ಕೇಂದ್ರದಿಂದ ‘ಸಬ್‌ ಕಾ ವಿನಾಶ್‌’! ಸಿದ್ದರಾಮಯ್ಯ ಆರೋಪ

Published : Apr 29, 2018, 07:27 AM IST
ಕೇಂದ್ರದಿಂದ ‘ಸಬ್‌ ಕಾ ವಿನಾಶ್‌’! ಸಿದ್ದರಾಮಯ್ಯ ಆರೋಪ

ಸಾರಾಂಶ

ಸಬ್‌ ಕಾ ವಿಕಾಸ್‌ ಅಲ್ಲ, ಸಬ್‌ ಕಾ ವಿನಾಶ್‌  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ವ್ಯಂಗ್ಯ ಮಾಡಿದ್ದಾರೆ. 

ಬೆಳಗಾವಿ: ಸಬ್‌ ಕಾ ವಿಕಾಸ್‌ ಅಲ್ಲ, ಸಬ್‌ ಕಾ ವಿನಾಶ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ವ್ಯಂಗ್ಯ ಮಾಡಿದ್ದು ಹೀಗೆ. 
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದಲ್ಲಿ, ಹುಕ್ಕೇರಿಗಳಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಮೊದಲು ಮೋದಿ ಹೇಳಿದಂತೆ ಸಬ್‌ ಕಾ ವಿಕಾಸ್‌ ಬದಲಾಗಿ ಸಬ್‌ ಕಾ ವಿನಾಶ್‌ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮೋದಿ ಹಾಗೂ ಅಮಿತ್‌ ಶಾ ಸುಳ್ಳು ಆರೋಪ ಮಾಡುತ್ತಿದ್ದು, ಯಾವುದೇ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ