ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕದ ಕಾಣಿಕೆ

First Published May 15, 2018, 12:05 PM IST
Highlights

 ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಿಜೆಪಿ ಕನಸು ನನಸಾಗುತ್ತಿದೆ.  ಭಾರತದ 21 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 22ನೇ ರಾಜ್ಯವಾದ ಕರ್ನಾಟಕದಲ್ಲಿಯೂ ಕೂಡ ಕಮಲ ಅರಳಿಸಲು ಸಜ್ಜಾಗಿದೆ.

ಬೆಂಗಳೂರು : ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಿಜೆಪಿ ಕನಸು ನನಸಾಗುತ್ತಿದೆ.  ಭಾರತದ 21 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 22ನೇ ರಾಜ್ಯವಾದ ಕರ್ನಾಟಕದಲ್ಲಿಯೂ ಕೂಡ ಕಮಲ ಅರಳಿಸಲು ಸಜ್ಜಾಗಿದೆ.

ಈ ಮೂಲಕ ದೇಶದಾದ್ಯಂತ ಕಮಲ ಪಕ್ಷವು ಅಶ್ವಮೇಧ ಯಾಗವನ್ನು ಕೈಗೊಂಡು ಕೈ ವಶದಲ್ಲಿದ್ದ ರಾಜ್ಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ.    

ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸದ್ಯ ಇಲ್ಲಿಯೂ ಕೂಡ  ತನ್ನ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ. 

ಪುದುಚೆರಿ ಹಾಗೂ ಪಂಜಾಬ್ ನಲ್ಲಿ ಮಾತ್ರವೇ ಸದ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ.  ದೇಶದೆಲ್ಲೆಡೆ ಮೋದಿ ಅಲೆಯು ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಕೂಡ ಗಾಳಿ ಬಲವಾಗಿ ಬೀಸಿದೆ. 

22ನೇ ರಾಜ್ಯವಾದ ಕರ್ನಾಟಕದಲ್ಲಿ ಕಮಲ ಪಾಳಯ ಆಡಳಿತ ನಡೆಸುವ ವಿಶ್ವಾಸದಲ್ಲಿದ್ದು, ನಾಯಕರು ಈ ನಿಟ್ಟಿನಲ್ಲಿ ಹೆಚ್ಚಿನ ಭರವಸೆ ಹೊಂದಿದ್ದಾರೆ.   

ಸದ್ಯದ ಫಲಿತಾಂಶದ ಪ್ರಕಾರ ಕಾಂಗ್ರೆಸ್ 72 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 109 ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ.  38 ಜೆಡಿಎಸ್ ಅಭ್ಯರ್ಥಿಗಳು ಮುಂದಿದ್ದಾರೆ. 18 ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದಿದ್ದು, 31 ಬಿಜೆಪಿ ಅಭ್ಯರ್ಥಿಗಳು ವಿಜಯ ಮಾಲೆ ಧರಿಸಿದ್ದಾರೆ.  ಜೆಡಿಎಸ್ 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 


ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಪಟ್ಟಿ

*ಅರುಣಾಚಲ ಪ್ರದೇಶ
*ಅಸ್ಸಾಂ
*ಬಿಹಾರ
*ಚತ್ತೀಸ್ ಗಢ
*ಗೋವಾ
*ಗುಜರಾತ್
*ಹರ್ಯಾಣ
*ಹಿಮಾಚಲ ಪ್ರದೇಶ
*ಜಮ್ಮು ಕಾಶ್ಮೀರ
*ಜಾರ್ಖಂಡ್
*ಮಧ್ಯ ಪ್ರದೇಶ
*ಮಹಾರಾಷ್ಟ್ರ
*ಮಣಿಪುರ
*ರಾಜಸ್ಥಾನ
*ಉತ್ತರ ಪ್ರದೇಶ
*ಉತ್ತರಾಖಂಡ್
*ನಾಗಾಲ್ಯಾಂಡ್
*ತ್ರಿಪುರ
*ಮೇಘಾಲಯ

click me!