
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಹಾಸನ ಕ್ಷೇತ್ರದಲ್ಲಿ ಜೆ. ಪ್ರೀತಂ ಗೌಡ ಗೆಲುವಿನ ನಗೆ ಬೀರಿದ್ದಾರೆ. ಅರಕಲಗೂಡಿನಲ್ಲಿ ಕಾಂಗ್ರೆಸ್'ನ ಪ್ರಬಲ ನಾಯಕರಾದ ಹಾಲಿ ಸಚಿವ ಎ.ಮಂಜು ತೀವ್ರ ಹಿನ್ನಡೆ ಅನುಭವಿಸಿದ್ದು ಜೆಡಿಎಸ್'ನ ಎ.ಟಿ.ರಾಮಸ್ವಾಮಿ ಗೆಲುವಿನ ಹೊಸ್ತಲಿನಲ್ಲಿದ್ದಾರೆ.
ಹೆಚ್.ಡಿ.ರೇವಣ್ಣ ಹೊಳೆ ನರಸಿಪುರದಲ್ಲಿ ಭಾರಿ ಅಂತರದಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಶ್ರವಣಬೆಳಗೋಳದಲ್ಲಿ ಜೆಡಿಎಸ್'ನ ಸಿ.ಎನ್. ಬಾಲಕೃಷ್ಣ ಜಯ ಸಾಧಿಸಿದ್ದಾರೆ.
ವಿಧಾನಸಭಾ ಚುನಾವಣೆ ಫಲಿತಾಂಶ: ಸಿಎಂ ಸೇರಿ ಬಹುತೇಕ ಸಚಿವರಿಗೆ ಸೋಲು