ಜೆಡಿಎಸ್ ಕಾಂಗ್ರೆಸ್ ಜೊತೆ ಹೋಗೋದು ಮೊದಲೇ ಪ್ಲಾನ್ ಆಗಿತ್ತಾ?

First Published May 22, 2018, 6:00 PM IST
Highlights

ಮಮತಾ, ಚಂದ್ರಶೇಖರ್, ಮಾಯಾವತಿ 15 ರ ಫಲಿತಾಂಶ ದಿನದ ಮುಂಚೆಯೇ 14  ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರು ದೇವೇಗೌಡರಿಗೆ ಫೋನ್ ಮಾಡಿ ಅತಂತ್ರ ವಿಧಾನಸಭೆ ಬಂದರೆ ಕಾಂಗ್ರೆಸ್ ಜೊತೆ ಹೋಗಿ. ಈ  ಬಗ್ಗೆ ಕುಮಾರಸ್ವಾಮಿಗೆ ಮೊದಲೇ ತಿಳಿಸಿ ಹೇಳಿ ಎಂದು ಹೇಳಿದ್ದರಂತೆ.

ಬೆಂಗಳೂರು (ಮೇ. 22):  ಮಮತಾ, ಚಂದ್ರಶೇಖರ್, ಮಾಯಾವತಿ 15 ರ ಫಲಿತಾಂಶ ದಿನದ ಮುಂಚೆಯೇ 14  ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರು ದೇವೇಗೌಡರಿಗೆ ಫೋನ್ ಮಾಡಿ ಅತಂತ್ರ ವಿಧಾನಸಭೆ ಬಂದರೆ ಕಾಂಗ್ರೆಸ್ ಜೊತೆ ಹೋಗಿ. ಈ ಬಗ್ಗೆ ಕುಮಾರಸ್ವಾಮಿಗೆ ಮೊದಲೇ ತಿಳಿಸಿ ಹೇಳಿ ಎಂದು ಹೇಳಿದ್ದರಂತೆ.

ಆದರೆ ಬಿಜೆಪಿಗೆ 104 ಸೀಟು ಬಂದಾಗ ಕುಮಾರಸ್ವಾಮಿ ಕೂಡ ಕಾಂಗ್ರೆಸ್ ಜೊತೆಗೆ ಹೋದರೆ ಮಾತ್ರ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ಲೆಕ್ಕಹಾಕಿದರಂತೆ. ಕಾಂಗ್ರೆಸ್‌ಗೆ 100 ಬಂದು ಬಿಜೆಪಿಗೆ 80 ಬಂದಿದ್ದರೆ ತಂದೆ ಮಗನ ನಡುವೆ, ಯಾರ ಜೊತೆಗೆ ಹೋಗೋದು ಎಂಬ ಬಗ್ಗೆ ಜಗ್ಗಾಟ ನಡೆಯುವ ಸಾಧ್ಯತೆಯಿತ್ತು ಎಂದು ಜೆಡಿಎಸ್ ನ ಆಪ್ತ ಮೂಲಗಳು ಇಲ್ಲಿ ಮಾತನಾಡಿಕೊಳ್ಳುತ್ತಿವೆ.  

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ  ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!