ಅಂದು ಕಾಂಗ್ರೆಸ್ ಜೊತೆ ಮೈತ್ರಿಗೆ ಹೋಗಿ ವಾಪಸ್ ಬಂದಿದ್ದರು ಕುಮಾರಸ್ವಾಮಿ!

Published : May 22, 2018, 05:48 PM IST
ಅಂದು ಕಾಂಗ್ರೆಸ್ ಜೊತೆ ಮೈತ್ರಿಗೆ ಹೋಗಿ ವಾಪಸ್ ಬಂದಿದ್ದರು ಕುಮಾರಸ್ವಾಮಿ!

ಸಾರಾಂಶ

2009 ರಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಮುನ್ನಾ ದಿನ ರಾತ್ರಿ 10 ಜನಪಥ್‌ನ ಎದುರು ಸಹಜವಾಗಿ ಪತ್ರಕರ್ತರು ಕ್ಯಾಮೆರಾ ಹಿಡಿದುಕೊಂಡು ಕಾಯುತ್ತಿದ್ದಾಗ ಒಂದು ಕಾರು ಬಂತು. ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾ ಕಂಡೊಡನೆ ರುಮಾಲು ಹಾಕಿಕೊಂಡರು.

ಬೆಂಗಳೂರು (ಮೇ. 22): 2009 ರಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಮುನ್ನಾ ದಿನ ರಾತ್ರಿ 10 ಜನಪಥ್‌ನ ಎದುರು ಸಹಜವಾಗಿ ಪತ್ರಕರ್ತರು ಕ್ಯಾಮೆರಾ ಹಿಡಿದುಕೊಂಡು ಕಾಯುತ್ತಿದ್ದಾಗ ಒಂದು ಕಾರು ಬಂತು. ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾ ಕಂಡೊಡನೆ ರುಮಾಲು ಹಾಕಿಕೊಂಡರು.

ನಂತರ ಕ್ಯಾಮೆರಾಮನ್‌ಗಳು ಕ್ಯಾಸೆಟ್ ತಿರುವಿ ನೋಡಿದಾಗ ಕಂಡದ್ದು ಕುಮಾರಸ್ವಾಮಿ ಅವರ ಮುಖ. ಆಗಷ್ಟೇ ಯಡಿಯೂರಪ್ಪ ಬೆಂಗಳೂರಿನಲ್ಲಿ ಅಧಿಕಾರ ಹಿಡಿದು ಕುಳಿತಿದ್ದರಿಂದ ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕುಮಾರ ಸ್ವಾಮಿ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡುವ ಯೋಚನೆಯಿಂದ ದೇವೇಗೌಡರು ಪುತ್ರನನ್ನು ಸೋನಿಯಾ ಮನೆಗೆ ಕಳುಹಿಸಿದ್ದರು. ಆದರೆ ಮರುದಿನ ಫಲಿತಾಂಶ ನೋಡಿದರೆ ಕಾಂಗ್ರೆಸ್‌ಗೆ ದೇವೇಗೌಡರ ಬೆಂಬಲವೇ ಬೇಕಾಗಿರಲಿಲ್ಲ. ಈಗ ಕಾಲಚಕ್ರ ತಿರುಗಿದೆ. ಜೆಡಿಎಸ್‌ನ ಮನೆ ಬಾಗಿಲಿಗೇ ಹೋಗಿ ಕಾಂಗ್ರೆಸ್ ಬೆಂಬಲ ನೀಡಿದೆ. 

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ