ಕಾರಲ್ಲಿ ಸಿಕ್ಕ 1.22 ಕೋಟಿ ರು.ಗೆ ಸಚಿವ ದೇಶಪಾಂಡೆ ನಂಟು

Published : May 11, 2018, 07:55 AM IST
ಕಾರಲ್ಲಿ ಸಿಕ್ಕ 1.22  ಕೋಟಿ ರು.ಗೆ ಸಚಿವ ದೇಶಪಾಂಡೆ ನಂಟು

ಸಾರಾಂಶ

ಕರ್ನಾಟಕ ಚುನಾವಣೆಗೆ ಇನ್ನು ಕೇವಲ 24 ಗಂಟೆ ಉಳಿದಿರುವ ಸಂದರ್ಭದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿಯು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಸಚಿವರಾದ ಆರ್.ವಿ.ದೇಶಪಾಂಡೆ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಬೆಂಗಳೂರು :  ಕರ್ನಾಟಕ ಚುನಾವಣೆಗೆ ಇನ್ನು ಕೇವಲ 24 ಗಂಟೆ ಉಳಿದಿರುವ ಸಂದರ್ಭದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿಯು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಸಚಿವರಾದ ಆರ್.ವಿ.ದೇಶಪಾಂಡೆ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಆದಾಯ ತೆರಿಗೆ ಇಲಾಖೆಯು ಮೇ 1ರಂದು ನೆಲಮಂಗಲದ ಬಳಿ ನಡೆಸಿದ ದಾಳಿಯೊಂದರಲ್ಲಿ 1.22 ಕೋಟಿ ರು. ಪತ್ತೆಯಾಗಿದೆ. ಈ ಹಣವು ಭಾರಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಸಂಬಂಧಿಸಿದ್ದು, ಚುನಾವಣಾ ವೆಚ್ಚಕ್ಕಾಗಿ ಸಾಗಿಸಲಾಗುತ್ತಿತ್ತು ಎಂದು ಅವರ ಆಪ್ತ ಕಾರ್ಯದರ್ಶಿ ಗುರುಪ್ರಸಾದ್ ಅವರು ಐಟಿ ಇಲಾಖೆ ಎದುರು ಒಪ್ಪಿಕೊಂಡಿದ್ದಾರೆ ಎಂದು ಐಟಿ ಮೂಲಗಳಿಂದ ತಿಳಿದುಬಂದಿದೆ. 

ಇದಲ್ಲದೆ, ಇದು ಸಚಿವ ರಿಗೆ ನಂಟು ಹೊಂದಿದ ಹಣ ಎಂಬುದನ್ನು ಸಾಬೀತುಪಡಿ ಸುವ ಚಿತ್ರಗಳು, ಮೊಬೈಲ್ ಸಂದೇಶಗಳು  ಲಭ್ಯವಾಗಿವೆ ಹಾಗೂ ಆರ್.ವಿ. ದೇಶಪಾಂಡೆ ಅವರ ಆಪ್ತ ಕಾರ್ಯದರ್ಶಿ ಗುರುಪ್ರಸಾದ್ ತಪ್ಪೊಪ್ಪಿಗೆ ಹೇಳಿಕೆಯಿಂದ ಆರ್.ವಿ.
ದೇಶಪಾಂಡೆ ಅವರಿಗೆ ಸಂಕಷ್ಟ ಎದುರಾಗಿದೆ

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ