ಭಾರೀ ಚುನಾವಣಾ ಅಕ್ರಮ : ಇದುವರೆಗೂ ಸಿಕ್ಕ ಹಣವೆಷ್ಟು..?

First Published May 12, 2018, 9:09 AM IST
Highlights

ಈ ಬಾರಿ 86.01 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಚುನಾವಣಾ ಆಯೋಗದ ವಿಶೇಷ ತಂಡಗಳು ಮತ್ತು ಪೊಲೀಸ್ ಇಲಾಖೆ 56.36ಕೋಟಿ ನಗದು ಜಪ್ತಿ ಮಾಡಿವೆ. ಇನ್ನುಳಿದ 30 ಕೋಟಿ ರು.ಗಿಂತ ಹೆಚ್ಚು ನಗದನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. 

ಬೆಂಗಳೂರು : ಈ ಬಾರಿ 86.01 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಚುನಾವಣಾ ಆಯೋಗದ ವಿಶೇಷ ತಂಡಗಳು ಮತ್ತು ಪೊಲೀಸ್ ಇಲಾಖೆ 56.36ಕೋಟಿ ನಗದು ಜಪ್ತಿ ಮಾಡಿವೆ. ಇನ್ನುಳಿದ 30 ಕೋಟಿ ರು.ಗಿಂತ ಹೆಚ್ಚು ನಗದನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಒಟ್ಟು 24.43 ಕೋಟಿ ರು. ಮೌಲ್ಯದ ಮದ್ಯವನ್ನು ವಶಪಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

1540 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 2131 ಸ್ಟಾಟಿಕ್ ಸರ್ವೆಲೆನ್ಸ್ ತಂಡವು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.12537 ಗೋಡೆ ಬರಹಗಳು, 17693 ಪೋಸ್ಟರ್‌ಗಳು ಮತ್ತು 711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ. ನೀತಿ ಸಂಹಿತೆ
ಉಲ್ಲಂಘನೆಗೆ ಸಂಬಂಧಿಸಿಂತೆ 165  ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸ್ಟಾಟಿಕ್ ಸರ್ವೆಲೆನ್ಸ್ ತಂಡವು 43 .86 ಕೋಟಿ ರು. ನಗದು, 15.26  ಕೋಟಿ ರು. ಮೌಲ್ಯದ 49 ಕೆ.ಜಿ. ಚಿನ್ನ, 15.97 ಲಕ್ಷ ರು. ಮೌಲ್ಯದ ಬೆಳ್ಳಿ, 3.24 ಲಕ್ಷ ರು. ಮೌಲ್ಯದ 268 ತಾಮ್ರದ
ಬಿಂದಿಗೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು.

ಫ್ಲೈಯಿಂಗ್ ಸ್ಕ್ವಾಡ್‌ಗಳು 12.07 ಕೋಟಿ ರು. ನಗದು, 4.10 ಕೋಟಿ ರು. ಮೌಲ್ಯದ ಚಿನ್ನ, 3.86 ಕೋಟಿ ರು. ಮೌಲ್ಯದ 237 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ 44 ಪ್ರಕರಣಗಳನ್ನು ದಾಖಲಿಸಲಾಗಿದೆ. 97,031 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದ್ದು, 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 40 ಸಾವಿರ ಜಾಮೀನುರಹಿತ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

click me!