ಬಂದಿವೆ 500- 2000 ರು. ನಕಲಿ ನೋಟು ಹುಷಾರ್..!

Published : May 12, 2018, 08:56 AM IST
ಬಂದಿವೆ 500- 2000 ರು. ನಕಲಿ ನೋಟು ಹುಷಾರ್..!

ಸಾರಾಂಶ

ಚುನಾವಣೆ ಸಂದರ್ಭದಲ್ಲೇ ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಪುಢಾರಿಗಳು ಈ ನಕಲಿ ನೋಟುಗಳನ್ನು ಹಂಚುತ್ತಿರುವ ಶಂಕೆ ವ್ಯಕ್ತವಾಗಿದೆ.   

ರಾಯಚೂರು/ಕೊಪ್ಪಳ: ಚುನಾವಣೆ ಸಂದರ್ಭದಲ್ಲೇ ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಪುಢಾರಿಗಳು ಈ ನಕಲಿ ನೋಟುಗಳನ್ನು ಹಂಚುತ್ತಿರುವ ಶಂಕೆ ವ್ಯಕ್ತವಾಗಿದೆ. 

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಪೆಟ್ರೋಲ್ ಬಂಕ್‌ವೊಂದರಲ್ಲಿ ಶುಕ್ರವಾರ 500 ಮುಖಬೆಲೆಯ 3 ನಕಲಿ ನೋಟುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಡಾಬಾ, ಹೋಟೆಲ್ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ 500  ಚಲಾವಣೆಯನ್ನು ಸ್ಥಗಿತಗೊಳಿಸಲಾಗಿದೆ. 

ದೊಡ್ಡ ನೋಟುಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕುವಂತಾಗಿದೆ. ಅಜ್ಜಿಗೂ ಮೋಸ: ಕೊಪ್ಪಳ ತಾಲೂಕಿನ ಶಹಪೂರ ಗ್ರಾಮದ ಯಲ್ಲಮ್ಮ ಕಂಬಳಿ ಎಂಬ ವಯೋವೃದ್ಧೆಗೂ ವಂಚಕರು ಟಗರು ಖರೀದಿ ವೇಳೆ ನಕಲಿ ನೋಟು ನೀಡಿ 10 ಸಾವಿರ ರುಪಾಯಿ ವಂಚಿಸಿ ದ್ದಾರೆ. ಯಲ್ಲಮ್ಮ ತಮ್ಮ ಎರಡು ಟಗರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ಅದರ ಬೆಲೆ ವಿಚಾರಿಸಿದ್ದಾರೆ. 

ಯಲ್ಲಮ್ಮ ಒಂದು ಟಗರಿಗೆ 5 ಸಾವಿರ ಎಂದಿ ದ್ದಾರೆ. ಅಪರಿಚಿತರು ಮರು ಮಾತನಾಡದೆ 2 ಸಾವಿರ ಮುಖ ಬೆಲೆಯ 5 ನೋಟುಗಳನ್ನು ಯಲ್ಲಮ್ಮ ಕೈಗೆ ನೀಡಿ ಎರಡು ಟಗರು ಖರೀದಿಸಿ ದ್ದಾರೆ. ನಂತರ ಯಲ್ಲಮ್ಮ ನೋಟುಗಳನ್ನು ಚಲಾವಣೆ ಮಾಡಲು ಹೋದಾಗ ಅವು ನಕಲಿ ಎಂಬುದು ಗೊತ್ತಾಗಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ